ಹೈದರಾಬಾದ್: ಗೋವು ಸಾಗಿಸುತ್ತಿದ್ದ ವ್ಯಕ್ತಿಗಳ ಮೇಲೆ ಗೋ ರಕ್ಷಕರಿಂದ ದಾಳಿ

ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ವಾಹನದ ಚಾಲಕ ಮತ್ತು ಕ್ಲೀನರ್ ಮೇಲೆ ಐವರು ಗೋವು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ವಾಹನದ ಚಾಲಕ ಮತ್ತು ಕ್ಲೀನರ್ ಮೇಲೆ ಐವರು ಗೋವು ರಕ್ಷಕರ ತಂಡ ದಾಳಿ ಮಾಡಿದ ಘಟನೆ ಸೋಮವಾರ ತಡರಾತ್ರಿ ಹೈದರಾಬಾದ್ ನ ಹೊರವಲಯದಲ್ಲಿ ನಡೆದಿದೆ.
ನಗರದ ಹೊರವಲಯದ ಬಿಬಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ್ದಾರೆ.
ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಗೋವುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ವಾಹನದ ಚಾಲಕ ಮತ್ತು ಕ್ಲೀನರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಈ ಇಬ್ಬರ ಮೇಲೆ ಗೋ ರಕ್ಷಕರಿಂದ ದೈಹಿಕ ಹಲ್ಲೆ ನಡೆದಿರುವುದನ್ನು ತಳ್ಳಿಹಾಕಿದ್ದಾರೆ.
ಹೈದರಾಬಾದ್ ಮೂಲದ ವ್ಯಾಪಾರಿ ಅಬ್ದುಲ್ ಅಹದ್ ಅವರು ಮೇಹಬುಬಾದ್ ಜಿಲ್ಲೆಯಲ್ಲಿ 23 ಹೋರಿಗಳನ್ನು ಖರೀದಿಸಿ ಅವುಗಳನ್ನು ಹೈದರಾಬಾದ್ ಗೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬ್ದುಲ್ ಅವರು, ಬಿಬಿನಗರ ತಲುಪುತ್ತಿದ್ದ ವಾಹನ ತಡೆದ ಗೋ ರಕ್ಷಕರ ತಂಡ, ಗೋ ಮಾತಾ ಗೋ ಮಾತಾ ಎಂದು ಘೋಷಣೆ ಕೂಗಿದ್ದಾರೆ. ಹಾಗ ನಮ್ಮ ಚಾಲಕ ಇವು ಹಸು ಅಲ್ಲ ಹೋರಿ ಎಂದು ಹೇಳಿದರು ಕೇಳದೇ ಅವರನ್ನು ವಾಹನದಿಂದ ಕೇಳಗಿಳಿಸಿ ಹಲ್ಲೆ ನಡೆಸಿದ್ದಾರೆ ಆರೋಪಿಸಿದ್ದಾರೆ.
ನಾನು 23 ಹೋರಿಗಳನ್ನು ಖರೀದಿಸಿ ಅವುಗಳನ್ನು ಹೈದರಾಬಾದ್ ನ ಕಸಾಯಿ ಖಾನೆಗೆ ಸಾಗಿಸುತ್ತಿದ್ದೆ ಎಂದು ಅಬ್ದುಲ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com