ತಮಿಳುನಾಡು ರಾಜಕೀಯದಲ್ಲಿ ಮತ್ತೆ ಸಂಚಲನ: ಪಳನಿ ಸ್ವಾಮಿ, ಪನ್ನೀರ್ ಸೆಲ್ವಂ ಬಣಗಳ ವಿಲೀನ!

ತಮಿಳುನಾಡು ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ಭುಗಿಲೆದ್ದಿದ್ದ ಬಣ ರಾಜಕೀಯ ಅಂತೂ ನಿರ್ಣಾಯಕ ಹಂತ ತಲುಪಿದ್ದು, ಪನ್ನೀರ್ ಸೆಲ್ವಂ ಬಣ ಹಾಗೂ ಸಿಎಂ ಪಳನಿ ಸ್ವಾಮಿ ಬಣ ಪರಸ್ಪರ ವಿಲೀನಕ್ಕೆ ಸಮ್ಮತಿ ಸೂಚಿಸಿವೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚೆನ್ನೈ: ತಮಿಳುನಾಡು ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ಭುಗಿಲೆದ್ದಿದ್ದ ಬಣ ರಾಜಕೀಯ ಅಂತೂ ನಿರ್ಣಾಯಕ ಹಂತ ತಲುಪಿದ್ದು, ಪನ್ನೀರ್ ಸೆಲ್ವಂ ಬಣ ಹಾಗೂ ಸಿಎಂ ಪಳನಿ ಸ್ವಾಮಿ ಬಣ ಪರಸ್ಪರ ವಿಲೀನಕ್ಕೆ ಸಮ್ಮತಿ  ಸೂಚಿಸಿವೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಇಂದು ಚೆನ್ನೈನಲ್ಲಿ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ಆಗಸ್ಟ್ 15ರ ಬಳಿಕ ಅಂದರೆ ಸ್ವಾತಂತ್ರ್ಯ ದಿನಾಚರಣೆ ದಿನದಂದು ಅಥವಾ ಅ ಬಳಿಕ ಸಿಎಂ ಪಳನಿ ಸ್ವಾಮಿ ಸಂಪುಟ ವಿಸ್ತರಣೆ ಮಾಡುವ  ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚೆನ್ನೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಇಂದು ತಮ್ಮ ಬೆಂಬಲಿಗ ಶಾಸಕ ಹಾಗೂ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆಸಿದ ಸಿಎಂ ಪಳನಿ ಸ್ವಾಮಿ ಅವರು ಹಿರಿಯ  ಅಭಿಪ್ರಾಯದಂತೆ ಬಣ ವಲೀನಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಮಾಜಿ ಸಿಎಂ ಪನ್ನೀರ್ ಸೆಲ್ವಂ ಕೂಡ ವೀಲನಕ್ಕೆ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ಉಭಯ ಬಣಗಳು ಮೂರು ಅಂಶಗಳ ಸಂಧಾನಕ್ಕೆ  ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರನ್ವಯ ಹಾಲಿ ಸಿಎಂ ಪಳನಿ ಸ್ವಾಮಿ ಅವರು ಸಿಎಂ ಆಗಿ ಮುಂದುವರೆಯಲಿದ್ದು, ಉಪ ಮುಖ್ಯಮಂತ್ರಿಯಾಗಿ ಒ ಪನ್ನೀರ್ ಸೆಲ್ವಂ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಪನ್ನೀರ್ ಸೆಲ್ವಂ ಅವರಿಗೆ ಹಣಕಾಸು ಅಥವಾ ಗೃಹ  ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಜವಾಬ್ದಾರಿ ನೀಡಲು ಪಳನಿ ಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ. ಅಂತೆಯೇ ಶಶಿಕಲಾ ಮತ್ತು ತಂಡವನ್ನು ಸರ್ಕಾರದಿಂದ ದೂರವಿಡುವಂತೆಯೂ ಪನ್ನೀರ್ ಸೆಲ್ವಂ ಆಗ್ರಹಿಸಿದ್ದು, ಇದಕ್ಕೆ  ಪಳನಿ ಸ್ವಾಮಿ ಅವರ ಕೂಡ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ ಈ ಹಿಂದೆ ಪಕ್ಷಕ್ಕೆ ಸಂಬಂಧಿಸಿದಂತೆ ಟಿಟಿವಿ ದಿನಕರನ್ ನೇಮಕಗಳಿಗೆ ಅಂಗೀಕಾರಕ್ಕೆ ಅನುಮೋದನೆ ನೀಡದಂತೆಯೂ ಪನ್ನೀರ್  ಸೆಲ್ವಂ ಆಗ್ರಹಿಸಿದ್ದು, ಇದಕ್ಕೂ ಪಳನಿ ಸ್ವಾಮಿ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಆರೋಗ್ಯ ಸಚಿವ ಸಿ ವಿಜಯ ಭಾಸ್ಕರ್ ರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ. ಈ ಸಂಧಾನದ ಬಳಿಕ ಈ ಹಿಂದೆ ಪನ್ನೀರ್ ಸೆಲ್ವಂ ಬಣ  ಚುನಾವಣಾ ಆಯೋಗಕ್ಕೆ ತಾನು ಸಲ್ಲಿಸಿದ್ದ ದೂರುಗಳನ್ನು ವಾಪಸ್ ಪಡೆಯಲು ಕೂಡ ನಿರ್ಧರಿಸಿದೆ. ಅಂತೆಯೇ ಪ್ರಸ್ತುತ ಪಕ್ಷದ ಕೈಬಿಟ್ಟು ಹೋಗಿರುವ ಎರಡೆಲೆ ಚಿನ್ಹೆಯನ್ನು ಮರಳಿ ವಾಪಸ್ ಪಡೆಯಲು ಒಗ್ಗಟ್ಟಿನಿಂದ ಮುನ್ನಡೆಯಲು ಉಭಯ ನಾಯಕರು ನಿರ್ಧರಿಸಿದ್ದಾರೆ.

ಶಶಿಕಲಾ, ಟಿಟಿವಿ ದಿನಕರನ್ ಪಕ್ಷದಿಂದ ದೂರ ಉಳಿಯಬೇಕು
ಇನ್ನು ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ದೂರವಿಡಲು ನಿರ್ಧರಿಸಲಾಗಿದ್ದು, ಈ ಹಿಂದೆ ಟಿಟಿವಿ ದಿನಕರನ್ ಪಕ್ಷದ ಸಂಬಂಧ ಜಿಲ್ಲಾವಾರು ಸಭೆ ನಡೆಸುವುದಾಗಿ  ಹೇಳಿಕೊಂಡಿದ್ದರು. ಪಕ್ಷ ಸಂಘಟನೆಗೆ ತಾವು ತೊಡಗುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆಗಳು ಪ್ರಸಾರವಾದ ಬೆನ್ನಲ್ಲೇ ಪಕ್ಷದ ಮುಖಂಡರು ಈ ನಿರ್ಧಾರ ಕೈಗೊಂಡಿರುವುದು ಶಶಿಕಲಾ ಬಣಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com