ದೆಹಲಿ ಪ್ರತಿಷ್ಠಿತ ರಸ್ತೆಯೊಂದರ ಹೋಟಲ್ ನಲ್ಲಿ ಮೆಮೊಸ್ ಗಳನ್ನು ನೀಡಲಾಗಿದೆ. ಈ ವೇಳೆ ಮೆಮೊಸ್ ಗಳನ್ನು ತಿಂದ 25 ಮಂದಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥರಾದ ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ 25 ಮಂದಿಯ ಪೈಕಿ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.