ಭಾರತ ಮತ್ತು ಪಾಕಿಸ್ತಾನ ದೇಶಗಳ 70ನೇ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು ಈ ಮಧ್ಯೆ ಭಾರತ ಮತ್ತು ಪಾಕಿಸ್ತಾನದ ಹಾಡುಗಾರರು ಎರಡು ದೇಶದ ರಾಷ್ಟ್ರಗೀತೆಯನ್ನು ಹಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಉಭಯ ದೇಶಗಳ ನಡುವೆ ಶಾಂತಿ ನೆಲೆಸಲಿ ಎಂಬ ಉದ್ದೇಶದೊಂದಿಗೆ ಈ ವಿಡಿಯೋವನ್ನು ಮಾಡಲಾಗಿದೆ. ಪಾಕ್ ರಾಷ್ಟ್ರಗೀತೆಯಿಂದ ಭಾರತದ ಜನ ಗಣ ಮನ ರಾಷ್ಟ್ರಗೀತೆಯನ್ನು ಜಂಟಿಯಾಗಿ ಹಾಡಿದ್ದಾರೆ.
ವಾಯ್ಸ್ ಆಫ್ ರಾಮ್ ಗ್ರೂಪ್ ಈ ವಿಡಿಯೋವನ್ನು ನಿರ್ಮಿಸಿದೆ. ಭಾರತೀಯರು ಪಾಕ್ ರಾಷ್ಟ್ರಗೀತೆ ಮತ್ತು ಪಾಕಿಸ್ತಾನಿಗರು ಭಾರತದ ರಾಷ್ಟ್ರಗೀತೆಯನ್ನು ಹಾಡಿರುವುದು ನಿಜಕ್ಕೂ ಉಭಯ ದೇಶಗಳ ನಡುವಿನ ಶಾಂತಿಗೆ ಸ್ಫೂರ್ತಿಯಾಗಿದೆ.