ಸ್ನೇಹಿತೆಗೆ ಸರಸ್ವತಿ ದೇವಿಯ ವಿಗ್ರಹದ ಉಡುಗೊರೆಯೊಂದಿಗೆ ಸ್ವದೇಶಕ್ಕೆ ಮರಳಿದ ಪಾಕ್ ಯುವತಿ

ಹಿಂದೂ-ಮುಸಲ್ಮಾನ ಸ್ನೇಹದ ಸಂಕೇತವಾಗಿ ಪಾಕಿಸ್ತಾನದ ಹುಡುಗಿಯೊಬ್ಬಳು ತನ್ನ ಸ್ನೇಹಿತೆಗೆ ಉಡುಗೊರೆ...
ಪಾಕಿಸ್ತಾನ-ಭಾರತದ ಧ್ವಜ
ಪಾಕಿಸ್ತಾನ-ಭಾರತದ ಧ್ವಜ
ಭೋಪಾಲ್: ಹಿಂದೂ-ಮುಸಲ್ಮಾನ ಸ್ನೇಹದ ಸಂಕೇತವಾಗಿ  ಪಾಕಿಸ್ತಾನದ ಹುಡುಗಿಯೊಬ್ಬಳು ತನ್ನ ಸ್ನೇಹಿತೆಗೆ ಉಡುಗೊರೆ ನೀಡಲು ಸರಸ್ವತಿ ದೇವಿಯ ಮೂರ್ತಿಯೊಂದಿಗೆ ಸ್ವದೇಶಕ್ಕೆ ಮರಳಿದ್ದಾಳೆ.
ಕರಾಚಿಯ ನಿವಾಸಿ 21 ವರ್ಷದ ತುಬಾ ಫಾತಿಮಾ ತನ್ನ ಅಜ್ಜಿ ಮನೆಯಾದ ಮಧ್ಯ ಪ್ರದೇಶದ ಹರ್ದಾ ಜಿಲ್ಲೆಯಿಂದ ನಿನ್ನೆ ತನ್ನ ತಾಯಿ ಮತ್ತು ಸೋದರನ ಜೊತೆ ಸ್ವದೇಶಕ್ಕೆ ಮರಳಿದ್ದಾಳೆ.
ಈ ಸಂದರ್ಭದಲ್ಲಿ ಭೋಪಾಲ್ ನಿಂದ 165 ಕಿಲೋ ಮೀಟರ್ ದೂರದಲ್ಲಿರುವ ಹರ್ದಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತುಬಾ ಫಾತಿಮ, ತಿಂಗಳ ಹಿಂದೆ ನಾನು ನನ್ನ ಅಜ್ಜಿ ಮನೆಗೆ ಹೋಗುವಾಗ ಪಾಕಿಸ್ತಾನದಲ್ಲಿರುವ ನನ್ನ ಸ್ನೇಹಿತೆಯಲ್ಲಿ ಭಾರತದಿಂದ ಬರುವಾಗ ಏನು ಉಡುಗೊರೆ ತರಬೇಕೆಂದು ಕೇಳಿದ್ದೆ. ಅದಕ್ಕವಳು ಸರಸ್ವತಿ ದೇವಿಯ ಮೂರ್ತಿ ತಂದು ಕೊಡು ಎಂದು ಕೇಳಿದಳು'' ಎಂದಳು.
ಆಕೆಯ ಮಾವ ಹರ್ದಾದಲ್ಲಿರುವ ಅಹದ್ ಖಾನ್ ಮಾತನಾಡಿ, ನನ್ನ ಸೊಸೆ ಸರಸ್ವತಿ ದೇವರ ಮೂರ್ತಿ ಬೇಕೆಂದು ಕೇಳಿದಳು. ದೇವರ ವಿಗ್ರಹಗಳು, ಮೂರ್ತಿಗಳನ್ನು ಮಾರುವ ಅಂಗಡಿಗೆ ಕರೆದುಕೊಂಡು ಹೋದೆನು. ಅಲ್ಲಿ ಅವಳಿಗೆ ಸರಸ್ವತಿ ದೇವರ ಮೂರ್ತಿ ಸಿಕ್ಕಿತು ಎಂದರು.
ನನ್ನ ಈ ಮರೆಯಲಾರದ ಉಡುಗೊರೆ ಸ್ನೇಹಿತೆ ರಿತುವಿನ ಆಸೆಯನ್ನು ಈಡೇರಿಸುತ್ತದೆ ಎಂದು ಭಾವಿಸುತ್ತೇನೆ ಎನ್ನುತ್ತಾರೆ ತುಬಾ.
ಪಾಕಿಸ್ತಾನದ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ತುಬಾ ಮತ್ತು ರಿತು ಉತ್ತಮ ಸ್ನೇಹಿತೆಯರು. ಕಳೆದ ವರ್ಷ ತಬಾಳ ತಾಯಿ ಮಧ್ಯ ಪ್ರದೇಶಕ್ಕೆ ಬಂದಿದ್ದಾಗ ರಿತುವಿಗಾಗಿ ಗಣೇಶ ದೇವರ ಮೂರ್ತಿ ತೆಗೆದುಕೊಂಡು ಹೋಗಿದ್ದರು ಎಂದು ನೆನಪಿಸುತ್ತಾರೆ ತುಬಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com