ಶ್ರೀನಗರ: ಉಗ್ರರನ್ನು ಹತ್ಯೆ ಮಾಡುವುದರಿಂದ ಕಾಶ್ಮೀರದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪ್ರತ್ಯೇಕತಾವಾದಿ ಮಿರ್ವಾಜಾ ಉಮರ್ ಫಾರೂಕ್ ಹೇಳಿದ್ದಾರೆ.
ಒಬ್ಬ ಉಗ್ರನನ್ನು ಹತ್ಯೆ ಮಾಡಿದರೆ 10 ಉಗ್ರರು ಹುಟ್ಟಿಕೊಳ್ಳುತ್ತಾರೆ. ಆದ್ದರಿಂದ ಕಾಶ್ಮೀರ ಸಮಸ್ಯೆಯನ್ನು ಉಗ್ರರನ್ನು ಹತ್ಯೆ ಮಾಡುವ ಮೂಲಕ ಬಗೆಹರಿಸಲು ಸಾಧ್ಯವಿಲ್ಲ ಎಂದಿದ್ದು, ಆಕ್ರಮಣ ಮತ್ತು ದಮನದಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಪ್ರತ್ಯೇಕತಾವಾದಿ ಫಾರೂಕ್ ಹೇಳಿದ್ದಾರೆ.
ಉಗ್ರರನ್ನು ಹತ್ಯೆ ಮಾಡುತ್ತಾ ಹೋದಷ್ಟೂ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವ ಜನರು ಹೆಚ್ಚುತ್ತಾರೆ. ಕಾಶ್ಮೀರಕ್ಕೆ ಬೇಕಾಗಿರುವುದು ರಾಜಕೀಯ ಪರಿಹಾರ ಎಂದು ಅಭಿಪ್ರಾಯಪಟ್ಟಿದ್ದಾರೆ.