ನೋಟು ನಿಷೇಧದ ಬಳಿಕ ಕಾಶ್ಮೀರ ಪ್ರತ್ಯೇಕಾವಾದಿಗಳಿಗೆ ಹಣದ ಕೊರತೆ: ಅರುಣ್ ಜೇಟ್ಲಿ

ನೋಟು ನಿಷೇಧ ಕ್ರಮದಿಂದ ಜಮ್ಮು- ಕಾಶ್ಮೀರದ ಪ್ರತ್ಯೇಕವಾದಿಗಳು ಹಾಗೂ ಮಾವೋವಾದಿಗಳಿಗೆ ಸರಬರಾಜಾಗುತ್ತಿದ್ದ ಹಣಕ್ಕೆ ಬ್ರೇಕ್ ಬಿದ್ದಿದ್ದು, ಹಣದ ಕೊರತೆಯಿಂದಾಗಿ ಪ್ರತ್ಯೇಕತಾವಾದಿಗಳು ಒದ್ದಾಡುವಂತಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮುಂಬೈ: ಕಳೆದ ವರ್ಷ ಕೇಂದ್ರ ಸರ್ಕಾರ ಕೈಗೊಂಡಿದ್ದ ಮಹತ್ವದ ನೋಟು ನಿಷೇಧ ಕ್ರಮದಿಂದ ಜಮ್ಮು- ಕಾಶ್ಮೀರದ ಪ್ರತ್ಯೇಕವಾದಿಗಳು ಹಾಗೂ ಮಾವೋವಾದಿಗಳಿಗೆ ಸರಬರಾಜಾಗುತ್ತಿದ್ದ ಹಣಕ್ಕೆ ಬ್ರೇಕ್ ಬಿದ್ದಿದ್ದು, ಹಣದ  ಕೊರತೆಯಿಂದಾಗಿ ಪ್ರತ್ಯೇಕತಾವಾದಿಗಳು ಒದ್ದಾಡುವಂತಾಗಿದೆ ಎಂದು ರಕ್ಷಣಾ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಭಾನುವಾರ ಮುಂಬೈನಲ್ಲಿ ಬಿಜೆಪಿ ಅಧ್ಯಕ್ಷ ಆಶಿಶ್‌ ಶೆಲರ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅರುಣ್ ಜೇಟ್ಲಿ, ನೋಟು ನಿಷೇಧ ಬಳಿಕ ಜಮ್ಮು-ಕಾಶ್ಮೀರದ ಪ್ರತ್ಯೇಕವಾದಿಗಳು ಹಾಗೂ ನಕ್ಸಲ್‌ ಪೀಡಿತ ರಾಜ್ಯಗಳಲ್ಲಿ  ನಡೆಯುತ್ತಿದ್ದ ವಿದ್ವಂಸಕ ಕೃತ್ಯಗಳು ಕಡಿಮೆಯಾಗಿದೆ. ಪ್ರತ್ಯೇಕವಾದಿಗಳು ಹಾಗೂ ಮಾವೋವಾದಿಗಳಿಗೆ ಸರಬರಾಜಾಗುತ್ತಿದ್ದ ಹಣಕ್ಕೆ ಬ್ರೇಕ್ ಬಿದ್ದಿದ್ದು, ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪ್ರತಿನಿತ್ಯ ಕಾಣುತ್ತಿದ್ದ ಪ್ರತಿಭಟನೆ, ಕಲ್ಲು ತೂರಾಟ  ಗಣನೀಯವಾಗಿ ಕಡಿಮೆಯಾಗಿದೆ, ನೋಟು ನಿಷೇಧಕ್ಕೂ ಮೊದಲು ಬೃಹತ್‌ ಸಂಖ್ಯೆಯಲ್ಲಿ ಕಲ್ಲು ತೂರಾಟಗಾರರ ಗುಂಪು ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೀಗ ಆ ಸಂಖ್ಯೆಯಲ್ಲಿ ಗಣನೀಯ ಕಡಿಮೆಯಾಗಿದೆ. ಹೆಚ್ಚೆಂದರೆ 25 ಮಂದಿ  ಸೇರಿಕೊಂಡು ಕಲ್ಲುತೂರಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕಾಶ್ಮೀರ ಸಮಸ್ಯೆಗೆ ಗಡಿಯಾಚೆಗಿನ ಉಗ್ರರ ಒಳನುಸುಳಿವಿಕೆ ತುಪ್ಪ ಸುರಿಯುತ್ತಿದ್ದು, ನಮ್ಮವರೇ ಗಡಿಯಾಚೆಗಿನ ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದಾರೆ. ಉಗ್ರರನ್ನು ಕೊಂದರೆ ನೂರಾರು ನಾಗರಿಕರು ಸೇನೆ ವಿರುದ್ಧ ಕಲ್ಲು  ತೂರುತ್ತಾರೆ. ಇಂತಹ ಬೆಳವಣಿಗೆಗಳಿಂದ ಕೆಲ ಸಂದರ್ಭಗಳಲ್ಲಿ ಉಗ್ರರು ತಪ್ಪಿಸಿಕೊಂಡು ಹೋಗಲು ನೆರವಾಗುತ್ತದೆ ಎಂದು ಜೇಟ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಉಗ್ರರಿಗೆ ನೆರವು ನೀಡುವ ಆರೋಪದ ಮೇರೆಗೆ  ಕೆಲ ಪ್ರತ್ಯೇಕತಾವಾದಿ ಮುಖಂಡರನ್ನು ಬಂಧನಕ್ಕೊಳಪಡಿಸಿರುವ ಎನ್ ಐಎ ಕಾರ್ಯಕ್ಕೆ ಜೇಟ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ನೋಟು ನಿಷೇಧವನ್ನು ಸಮರ್ಥಿಸಿಕೊಂಡ ಅರುಣ್ ಜೇಟ್ಲಿ, ಈ ಹಿಂದೆ ದೇಶದಲ್ಲಿ ಹಣದ ಹೊರ ಹರಿವು ಹೆಚ್ಚಾಗಿತ್ತು. ಆದರೆ ಇದೀಗ ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕ ಈ ಸಮಸ್ಯೆಯನ್ನು  ತಡೆಗಟ್ಟಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com