ಅಂತೂ "ಎರಡೆಲೆ"ಗಾಗಿ ಒಂದಾದ ಎಐಎಡಿಎಂಕೆ!

ತೀವ್ರ ಕುತೂಹಲ ಕೆರಳಿಸಿದ್ದ ಎಐಎಡಿಎಂಕೆ ಪಕ್ಷದ ಬಣಗಳ ವಿಲೀನ ಪ್ರಕ್ರಿಯೆಗೆ ಅಂತೂ ಚಾಲನೆ ದೊರೆತಿದ್ದು, ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣದ ಹಲವು ಬೇಡಿಕೆಗಳಿಗೆ ಪಳನಿ ಸ್ವಾಮಿ ಬಣ ಒಪ್ಪಿಗೆ ನೀಡಿದ ಪರಿಣಾಣ ಉಭಯ ಬಣಗಳು ಒಗ್ಗೂಡಿವೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ಎಐಎಡಿಎಂಕೆ ಪಕ್ಷದ ಬಣಗಳ ವಿಲೀನ ಪ್ರಕ್ರಿಯೆಗೆ ಅಂತೂ ಚಾಲನೆ ದೊರೆತಿದ್ದು, ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣದ ಹಲವು ಬೇಡಿಕೆಗಳಿಗೆ ಪಳನಿ ಸ್ವಾಮಿ ಬಣ ಒಪ್ಪಿಗೆ ನೀಡಿದ ಪರಿಣಾಮ  ಉಭಯ ಬಣಗಳು ಒಗ್ಗೂಡಿವೆ ಎಂದು ತಿಳಿದುಬಂದಿದೆ.

ಇಂದು ಚೆನ್ನೈನಲ್ಲಿರುವ ಎಐಎಡಿಎಂಕೆ ಪಕ್ಷ ಪ್ರಧಾನ ಕಚೇರಿಗೆ ಆಗಮಿಸಿದ ಪನ್ನೀರ್ ಸೆಲ್ವಂ ಹಾಗೂ ಪಳನಿ ಸ್ವಾಮಿ ಬಣಗಳ ನಾಯಕರು ಪರಸ್ಪರ ಕೈ ಕುಲುಕುವ ಮೂಲಕ ವಿಲೀನಕ್ಕೆ ಸಮ್ಮತಿ ಸೂಚಿಸಿದ್ದಾರೆ. ಇನ್ನು ಪನ್ನೀರ್  ಸೆಲ್ವಂ ಬಣ ಈ ಹಿಂದೆ ಮುಂದಿಟ್ಟಿದ್ದ ಎಲ್ಲ ಬೇಡಿಕೆಗಳನ್ನೂ ಈಡೇರಿಸುವ ಕುರಿತು ಸಿಎಂ ಪಳನಿಸ್ವಾಮಿ ಭರವಸೆ ನೀಡಿರುವ ಹಿನ್ನಲೆಯಲ್ಲಿ ಪನ್ನೀರೆ ಸೆಲ್ವಂ ಬಣ ವಿಲೀನ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಇನ್ನು ಸಿಎಂ ಆಗಿ  ಪಳನಿ ಸ್ವಾಮಿ ಮುಂದುವರೆಯಲಿದ್ದು, ಉಪ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಅವರು ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಅಂತೆಯೇ ಪನ್ನೀರ್ ಸೆಲ್ವಂ ರೊಂದಿಗೆ ಅವರ ಬಣದ ಹಲವು ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಎಂದು ಹೇಳಲಾಗಿದೆ.

ಪಕ್ಷದಿಂದ ಶಶಿಕಲಾ ಮತ್ತು ಟೀಂ ಗೆ ಗೇಟ್ ಪಾಸ್!
ಇದೇ ವೇಳೆ ಎಐಎಡಿಎಂಕೆ ಪಕ್ಷದಲ್ಲಿನ ಬಿರುಕಿಗೆ ಕಾರಣವಾಗಿದ್ದ ಶಶಿಕಲಾ ಮತ್ತು ಅವರ ಬೆಂಬಲಿಗ ಪಡೆಯನ್ನು ಪಕ್ಷದಿಂದಲೇ ಹೊರ ಹಾಕುವ ನಿರ್ಧಾರಕ್ಕೆ ಉಭಯ ಬಣಗಳು ಬಂದಿದ್ದು, ಈ ಕುರಿತು ಶೀಘ್ರದಲ್ಲೇ ಸುದ್ದಿಗೋಷ್ಠಇ  ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇಂದು ಸಂಜೆ ಉಭಯ ಬಣಗಳ ನಾಯಕರು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿ ಬಣ ವಿಲೀನದ ಕುರಿತು ಮಾಹಿತಿ ನೀಡಲಿದ್ದಾರೆ. ಅಂತೆಯೇ ಉಪ  ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಮಾಜಿ ಸಿಎಂ ಜಯಲಲಿತಾ ಅವರ ನಿಧನದ ಬಳಿಕ ತಮಿಳುನಾಡಿನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನ ಪರಿಣಾಮ ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ  ಕೆಳಗಿಳಿಸಲಾಗಿತ್ತು. ಬಳಿಕ ಜಯಾ ಆಪ್ತೆ ಶಶಿಕಾಲ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಬಳಿಕ ನಡೆದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಶಶಿಕಲಾ ಜೈಲು ಸೇರುವಂತಾಗಿತ್ತು. ಎಐಎಡಿಎಂಕೆ ಪಕ್ಷ  ಇಬ್ಭಾಗವಾಗಿ ಶಶಿಕಲಾ ಪಳನಿ ಸ್ವಾಮಿ ಅವರನ್ನು ಸಿಎಂ ಆಗಿ ನೇಮಕ ಮಾಡಿದ್ದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿ ಪನ್ನೀರ್ ಸೆಲ್ವಂ ಬಣ ಸರ್ಕಾರದಿಂದ ದೂರವುಳಿದಿತ್ತು,. ಬಳಿಕ ಜಯಾ ನಿಧನದಿಂದಾಗಿ ಆರ್ ಕೆ ನಗರ ವಿಧಾನಸಭಾ ಚುನಾವಣೆ ಹಲವು ರಾಜಕೀಯ ತಿರುವುಗಳಿಗೆ ಕಾರಣವಾಯಿತು.  ಜಯಲಲಿತಾ  ಅವರ ಸ್ವಕ್ಷೇತ್ರವಾಗಿದ್ದ ಆರ್ ಕೆ ನಗರವನ್ನು ಶತಾಯಗತಾಯ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಎಐಎಡಿಎಂಕೆಯ ಉಭಯ ಬಣಗಳು ಹರ ಸಾಹಸ ಪಟ್ಟಿದ್ದವು. ಅಲ್ಲದೆ ಚುನಾವಣಾ ಆಯೋಗ ಪಕ್ಷದಿಂದ ಹಿಂಪಡೆದಿದ್ದ ಎರಡೆಲೆ  ಚಿನ್ಹೆಗಾಗಿಯಾ ಭಾರಿ ಲಾಭಿಯೇ ನಡೆದಿತ್ತು.

ಎರಡೆಲೆ ಚಿನ್ಹೆಗಾಗಿ  ಚುನಾವಣಾ ಆಯೋಗದ ಸದಸ್ಯರಿಗೆ ಲಂಚ ನೀಡಲು ಮುಂದಾಗು ಮೂಲಕ ಟಿಟಿವಿ ದಿನಕರನ್ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com