ಮೊದಲು ಎಚ್ಚರಿಕೆ.. ನಂತರ ಬುಲೆಟ್: ಹಿಂಸಾಚಾರಿಗಳಿಗೆ ರೋಹ್ಟಕ್ ಪೊಲೀಸ್ ಎಚ್ಚರಿಕೆ!

ಅತ್ಯಾಚಾರಿ ಬಾಬಾಗೆ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಹಿಂಸಾಚಾರಿಗಳಿಗೆ ರೋಹ್ಟಕ್ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದು, ಮಿತಿ ಮೀರಿದರೆ ಗುಂಡಿನ ದಾಳಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಂಡೀಘಢ: ಅತ್ಯಾಚಾರಿ ಬಾಬಾಗೆ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಹಿಂಸಾಚಾರಿಗಳಿಗೆ ರೋಹ್ಟಕ್ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದು, ಮಿತಿ ಮೀರಿದರೆ ಗುಂಡಿನ ದಾಳಿ ನಡೆಸಲಾಗುತ್ತದೆ  ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೋಹ್ಟಕ್ ಪೊಲೀಸ್ ಉಪಾಯುಕ್ತ ಅತುಲ್ ಕುಮಾರ್ ಅವರು, ಹಿಂಸಾಚಾರಕ್ಕಿಳಿಯುವ ದುಷ್ಕರ್ಮಿಗಳಿಗೆ ಮೊದಲು ಎಚ್ಚರಿಕೆ ನೀಡಿ. ಆಗಲೂ ಮಿತಿ ಮೀರಿ ವರ್ತಿಸಿದರೆ ಬಳಿಕ  ಬುಲೆಟ್ ಗಲ ಮೂಲಕ ಉತ್ತರಿಸಿ ಎಂದು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರೋಹ್ಟಕ್ ನ ಸುನಾರಿಯಾ ಕೇಂದ್ರ ಕಾರಾಗೃಹದಲ್ಲಿ ಇಂದು ಅತ್ಯಾಚಾರಿ ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ಗೆ ಶಿಕ್ಷೆ ಪ್ರಮಾಣ ಘೋಷಣೆ ಮಾಡಲಿದ್ದು, ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕ ಘಟನೆ  ನಡೆಯದಂತೆ ಭಾರಿ ಭದ್ರತೆ ಒದಗಿಸಲಾಗಿದೆ. ಹೀಗಿದ್ದೂ ದುಷ್ಕರ್ಮಿಗಳು ಹಿಂಸಾಚಾರಕ್ಕೆ ಇಳಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ರೋಹ್ಟಕ್ ಜನತೆ ಯಾವುದೇ ಕಾರಣಕ್ಕೂ  ಆತಂಕ ಪಡುವ ಅಗತ್ಯವಿಲ್ಲ. ನಗರಾದ್ಯಂತ ಸೂಕ್ತ ಭದ್ರತೆ ಮಾಡಲಾಗಿದೆ. ಹಿಂಸಾಚಾರಕ್ಕಿಳಿಯುವವರಿಗೆ ಈ ಬಾರಿ ಕಠಿಣ ಪಾಠ ಕಲಿಸಲಿದ್ದೇವೆ. ರೋಹ್ಟಕ್ ನಲ್ಲಿ ಯಾರೂ ಕೂಡ ಯಾವುದೇ ರೀತಿಯ ಸಾರ್ವಜನಕರಿಗೆ ತೊಂದರೆ  ನೀಡುವಂತಹ ಕಾರ್ಯಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿಕೊಂಡರು.

ಇದೇ ವೇಳೆ ಭದ್ರತಾ ಪಡೆಗಳಿಗೆ ಸೂಚನೆ ನೀಡಿರುವ ಉಪಾಯುಕ್ತ ಅತುಲ್ ಕುಮಾರ್ ಅವರು, ಮೊದಲು ಎಚ್ಚರಿಕೆ ನೀಡಿ. ಆಗಲೂ ಹಿಂಸಾಚಾರ ಕೈ ಬಿಡದಿದ್ದರೆ ಗುಂಡಿನ ದಾಳಿ ನಡೆಸಿ ಎಂದು ಸೂಚನೆ ನೀಡಿದ್ದಾರೆ ಎಂದು  ತಿಳಿದುಬಂದಿದೆ. ಪ್ರಸ್ತುತ ರೋಹ್ಟಕ್ ನಲ್ಲಿ ಸಿಐಎಸ್ ಎಫ್, ಬಿಎಸ್ ಎಫ್ ಹಾಗೂ ಕೇಂದ್ರೀಯ ಮೀಸಲು ಪಡೆಯ ಒಟ್ಟು 8 ತುಕಡಿಗಳನ್ನು ನಿಯೋಜಿಸಲಾಗಿದೆ.

ಪಂಜಾಬ್, ಹರಿಯಾಣ ಪರಿಸಿತ್ಥಿಗಳನ್ನು ಅವಲೋಕಿಸಿ: ಎನ್ಎಸ್'ಎ, ಐಬಿಗೆ ರಾಜನಾಥ್ ಸೂಚನೆ
ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರಾಮ್ ರಹೀಮ್ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇಂದು ಪ್ರಕಟಿಸುತ್ತಿರುವ ಹಿನ್ನಲೆಯಲ್ಲಿ ಮತ್ತಷ್ಟು ಹಿಂಸಾಚಾರ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಹರಿಯಾಣ ಹಾಗೂ ಪಂಜಾಬ್ ಪರಿಸ್ಥಿತಿಗಳನ್ನು ಸುಧೀರ್ಘವಾಗಿ ಅವಲೋಕಿಸಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂದ್ ಅವರು ಎನ್ಎಸ್ಎ ಹಾಗೂ ಐಬಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವರ್ ಹಾಗೂ ಗುಪ್ತಚರ ಇಲಾಖೆಯ ನಿರ್ದೇಶಕ ದಿನೇಶ್ವರ್ ಶರ್ಮಾ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿರುವ ರಾಜನಾಥ್ ಸಿಂಗ್ ಅವರು, ಪಂಜಾಬ್ ಹಾಗೂ ಹರಿಯಾಣ ಪರಿಸ್ಥಿತಿ ಕುರಿತಂತೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com