ಪುಲ್ವಾಮ ಪೊಲೀಸ್ ಕ್ಯಾಂಪ್ ಮೇಲೆ ಉಗ್ರರ ದಾಳಿ: ಕೇಂದ್ರದ ವಿರುದ್ಧ ಹರಿಹಾಯ್ದ ಶಿವಸೇನೆ

ಪುಲ್ವಾಮ್ ಪೊಲೀಸ್ ಕ್ಯಾಂಪ್ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ 8 ಯೋಧರು ಹುತಾತ್ಮರಾದ ಪ್ರಕರಣ ಸಂಬಂಧ ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ಶಿವಸೇನೆ ಸೋಮವಾರ ಹರಿಹಾಯ್ದಿದೆ...
ಶಿವಸೇನೆ (ಸಂಗ್ರಹ ಚಿತ್ರ)
ಶಿವಸೇನೆ (ಸಂಗ್ರಹ ಚಿತ್ರ)
ಮುಂಬೈ: ಪುಲ್ವಾಮ್ ಪೊಲೀಸ್ ಕ್ಯಾಂಪ್ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ 8 ಯೋಧರು ಹುತಾತ್ಮರಾದ ಪ್ರಕರಣ ಸಂಬಂಧ ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ಶಿವಸೇನೆ ಸೋಮವಾರ ಹರಿಹಾಯ್ದಿದೆ. 
ಪುಲ್ವಾಮಾದಲ್ಲಿ ನಡೆದ ಎನ್ ಕೌಂಟರ್ ಕುರಿತಂತೆ ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಭಯೋತ್ಪಾದನೆ ಕಡಿಮೆಯಾಗುತ್ತಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಯ ಮೇಲೆ ಸಂಶಯ ಬರುತ್ತಿದೆ ಎಂದು ಹೇಳಿಕೊಂಡಿದೆ. 
ಪುಲ್ವಾಮ ಎನ್ ಕೌಂಟರ್ ಪ್ರಕರಣ ಕಾಶ್ಮೀರದ ಸುರಕ್ಷತೆ ಬಗ್ಗೆ ಕೇಂದ್ರ ನೀಡಿದ್ದ ಹೇಳಿಕೆಯನ್ನು ಪ್ರಶ್ನಾರ್ಹ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ ಎಂದು ಹೇಳಿದೆ. 
ಇದೇ ವೇಳೆ ಡೇರಾ ಸಚ್ಚಾ ಸೌದ ರಾಮ್ ರಹೀಂ ವಿರುದ್ಧ ನ್ಯಾಯಾಲಯ ತೀರ್ಪು ಪ್ರಕಟಿಸಿದ ಬಳಿಕ ಹರಿಯಾಣದಲ್ಲಿ ಸೃಷ್ಟಿಯಾದ ಹಿಂಸಾಚಾರವನ್ನು ಶಿವಸೇನೆ ತೀವ್ರವಾಗಿ ಖಂಡಿಸಿದೆ. 
ನಂಬಿಕೆಯ ಹೆಸರಿನಲ್ಲಿ ನಡೆಸಲಾಗುತ್ತಿರುವ ಹಿಂಸಾಚಾರ ಖಂಡನೀಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಆದರೆ, ಮತ್ತೊಂದೆಡೆ ಹೈಕೋರ್ಟ್ ಸರ್ಕಾರದ ವಿರುದ್ಧವೇ ತೀವ್ರವಾಗಿ ಕಿಡಿಕಾರಿತ್ತು. ರಾಜಕೀಯ ಅಜೆಂಡಾಗಳಿಂದಾಗಿ ಹರಿಯಾಣ ಸರ್ಕಾರ ಪಂಚಕುಲ ಹೊತ್ತಿಯುವಂತೆ ಮಾಡಿದೆ. ಇದು ನಿಜಕ್ಕೂ ಆಘಾತಕಾರಿ ವಿಚಾರ ಎಂದು ಹೇಳಿತ್ತು. ಈ ರೀತಿಯ ಘಟನೆಗಳು ದೇಶದಾದ್ಯಂತ ನಡೆಯುತ್ತಿದೆ ಎಂದು ತಿಳಿಸಿದೆ. 
ಶತ್ರುಗಳನ್ನು ಹೊರಗೆ ಹಾಕಿ ದೇಶವನ್ನು ರಕ್ಷಣೆ ಮಾಡುತ್ತಿರುವುದು ಸೇನೆ. ಹಣ ಪಡೆಯುತ್ತಿರುವ ಜನರಲ್ಲ. ದೇಶವೇ ಇಲ್ಲ ಎಂದಾದ ಮೇಲೆ ಹಣದಿಂದ ಏನನ್ನು ಮಾಡುತ್ತೀರಿ? ನಮ್ಮ ಯೋಧರು ದೇಶಕ್ಕಾಗಿ ಹೋರಾಟ ಮಾಡುತ್ತಿರುವುದರಿಂದಲೇ ನಾವು ಕಾಶ್ಮೀರದ ಹಾಗೂ ಡೋಕ್ಲಾಮ್ ನಲ್ಲಿರುವ ಶತ್ರುಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿದೆ ಎಂದಿದೆ. 
ಪುಲ್ವಾಮ ಎನ್ ಕೌಂಟರ್ ನಲ್ಲಿ ಹುತಾತ್ಮರಾದ ರವೀಂದ್ರ ಧನವಾಡೆಯವರು ಮಹಾರಾಷ್ಟ್ರ ರಾಜ್ಯದ ಹೆಮ್ಮೆಯಾಗಿದ್ದಾರೆ. ಮರಾಠಿಗರು ಯಾವಾಗಲೂ ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡುತ್ತಿರುತ್ತಾರೆ. ದೇಶಕ್ಕಾಗಿ ರಕ್ತ ನೀಡಲು ನಾವು ಸದಾಕಾಲ ಮುಂದೆ ಇರುತ್ತೇವೆ. ಮಹಾರಾಷ್ಟ್ರದೊಂದಿಗೆ ಮುಗ್ಧರಂತೆ ನಟಿಸುತ್ತಿರುವವರು ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಶಿವಸೇನೆ ಹೇಳಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com