ಸಿರ್ಸಾ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದದ ಮುಖ್ಯಸ್ಥ ಹಾಗೂ ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಸಿರ್ಸಾ ಆಶ್ರಮದಲ್ಲಿದ್ದ ಎಲ್ಲಾ ಬೆಂಬಲಿಗರನ್ನು ಭಾರಿ ಭದ್ರತೆಯೊಂದಿಗೆ ತೆರವುಗೊಳಿಸಲಾಗುತ್ತಿದ್ದು, ಆಶ್ರಮದಲ್ಲಿದ್ದ 18 ಅಪ್ರಾಪ್ತ ಬಾಲಕಿಯರನ್ನು ಮಂಗಳವಾರ ರಕ್ಷಿಸಲಾಗಿದೆ.