ಮುಂಬೈನಲ್ಲಿ ಮಹಾಮಳೆ ಅವಾಂತರ: ರೈಲು-ರಸ್ತೆ ಸಂಚಾರ, ಜನಜೀವನ ಸಂಪೂರ್ಣ ಅಸ್ತವ್ಯಸ್ತ

ವಾಣಿಜ್ಯ ನಗರಿ ಮುಂಬೈನಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ಇಡೀ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಗರ ಜೀವನ ಬಹುತೇಕ ಸ್ಥಬ್ಧಗೊಂಡಿದೆ.
ಮುಂಬೈನಲ್ಲಿ ಭಾರಿ ಮಳೆ
ಮುಂಬೈನಲ್ಲಿ ಭಾರಿ ಮಳೆ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ಇಡೀ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಗರ ಜೀವನ ಬಹುತೇಕ ಸ್ಥಬ್ಧಗೊಂಡಿದೆ.

ಮುಂಬೈನ ಬಹುತೇಕ ಭಾಗ ಜಾಲಾವೃತ್ತವಾಗಿದ್ದು, ಹಳಿಗಳ ಮೇಲೆ ನೀರು ನಿಂತಿರುವುದರಿಂದ ರೈಲು ಸೇವೆ ಅಸ್ಥವ್ಯಸ್ತವಾಗಿದೆ. ಮಳೆಯಿಂದಾಗಿ ಪಶ್ಚಿಮ ರೈಲ್ವೇ ವಿಭಾಗದಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕೇಂದ್ರ  ರೈಲ್ವೇ ವಿಭಾಗದಲ್ಲಿ ಕೇವಲ ಬೆರಳಿಕೆಯಷ್ಚು ರೈಲುಗಳು ಮಾತ್ರ ಸಂಚರಿಸುತ್ತಿವೆ. ರಸ್ತೆ ಮೇಲೆ ನೀರು ನಿಂತ ಪರಿಣಾಮ ರಸ್ತೆ ಸಂಚಾರ ಕೂಡ ಅಸ್ತವ್ಯಸ್ಥವಾಗಿದ್ದು, ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಗಿದೆ.

2005ರ ಜುಲೈ ಬಳಿಕ ಅತೀ ಹೆಚ್ಚು ವರ್ಷಧಾರೆ ಕಂಡ ವಾಣಿಜ್ಯ ನಗರಿ

ಇನ್ನು ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ಯವ್ಯಸ್ಥಗೊಂಡಿರುವ ಬೆನ್ನಲ್ಲೇ, ಇದು ಕಳೆದ 12 ವರ್ಷಗಳಲ್ಲೇ ಬಿದ್ದ ದಾಖಲೆ ಪ್ರಮಾಣದ ಮಳೆಯಾಗಿದೆ ಎಂದು ಹವಮಾನ ಇಲಾಖೆ  ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. 2005ರ ಜುಲೈ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಮುಂಬೈ ಅತೀ ಹೆಚ್ಚು ಮಳೆ ಕಂಡಿದೆ ಎಂದು ಹೇಳಲಾಗುತ್ತಿದೆ. ಮುಂಬೈನ ದಾದರ್ ಪ್ರದೇಶದಲ್ಲಿ ದಾಖಲೆ ಪ್ರಮಾಣದ 115 ಮಿಲಿ  ಮೀಟರ್ ಮಳೆ ಬಿದ್ದಿದ್ದರೆ, ಮಹಾಲಕ್ಷ್ಮಿ ಪ್ರದೇಶದಲ್ಲಿ 105 ಮಿಲಿ ಮೀಟರ್ ಮಳೆ ಬಿದ್ದಿದೆ ಎಂದು ಹಮಾವಾನ ಇಲಾಖೆ ಮಾಹಿತಿ ನೀಡಿದೆ.

ಮುಂಬೈ ಮೂರು ಎನ್ ಡಿಆರ್ ಎಫ್ ತಂಡ
ಮುಂಬೈನಲ್ಲಿ ಭಾರಿ ಮಳೆಯಾದುತ್ತಿದ್ದಂತೆಯೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಪ್ರವಾಗ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಮುಂಬೈ ನಗರಕ್ಕೆ 3 ಎನ್ ಡಿಆರ್ ಎಫ್ ತಂಡವನ್ನು ರವಾನಿಸಲಾಗಿದೆ. ಅಂತೆಯೇ ಪುಣೆ ನಗರದಲ್ಲೂ  ಭಾರಿ ಮಳೆ ಬೀಳುತ್ತಿದ್ದು, ಅಲ್ಲಿಯೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪುಣೆಗೆ 2 ಎನ್ ಡಿಆರ್ ಎಪ್ ತಂಡವನ್ನು ರವಾನೆ ಮಾಡಲಾಗಿದೆ.

24 ಗಂಟೆಗಳಲ್ಲಿ ಮತ್ತೆ ಭಾರಿ ಮಳೆ ಸಂಭವ
ಈ ಹಿಂದೆ ಬಿದ್ದ ಭಾರಿ ಮಳೆಯ ಆಘಾತದಿಂದ ಇನ್ನೂ ಮುಂಬೈ ಜನತೆ ಹೊರಬಂದಿಲ್ಲ. ಅದಾಗಲೇ ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 24 ಗಂಟೆಗಳಲ್ಲಿ ಮುಂಬೈನಲ್ಲಿ ಭಾರಿ  ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಮನೆಯಿಂದ ಹೊರಬರದಂತೆ ಜನತೆಗೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com