ಪ್ರತಿ ಶುಕ್ರವಾರವನ್ನು 'ಸಹಾಯ ಹಸ್ತ ದಿನ'ವನ್ನಾಗಿ ಘೋಷಿಸಿದ ಸಿಎಂ ಚಂದ್ರಬಾಬು ನಾಯ್ಡು

ರಾಜ್ಯದಲ್ಲಿ ಉತ್ತಮ ಆಡಿತವನ್ನು ನೀಡುವ ಸಲುವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡು ಅವರು ಉತ್ತಮ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೇ ತರುತ್ತಲೇ ಇದ್ದು, ಇದೀಗ ವಾರದ ಪ್ರತಿ ಶುಕ್ರವಾರವನ್ನು 'ಸಹಾಯ ಹಸ್ತದ ದಿನ' ಎಂದು...
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡು
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡು
Updated on: 
ಅಮರಾವತಿ: ರಾಜ್ಯದಲ್ಲಿ ಉತ್ತಮ ಆಡಿತವನ್ನು ನೀಡುವ ಸಲುವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡು ಅವರು ಉತ್ತಮ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೇ ತರುತ್ತಲೇ ಇದ್ದು, ಇದೀಗ ವಾರದ ಪ್ರತಿ ಶುಕ್ರವಾರವನ್ನು 'ಸಹಾಯ ಹಸ್ತದ ದಿನ' ಎಂದು ಬುಧವಾರ ಘೋಷಣೆ ಮಾಡಿದ್ದಾರೆ. 
ವಾರದಲ್ಲಿರುವ ಶುಕ್ರುವಾರದ ದಿನದಂದು ತಮ್ಮ ರಾಜ್ಯದ ಅತೀ ಬಡವರು ಹಾಗೂ ದುರ್ಬಲ ವರ್ಗದ ಜನರನ್ನುಬೇಟಿ ಮಾಡಲು ನಿರ್ಧರಿಸಿರುವ ಚಂದ್ರಬಾಬು ನಾಯ್ಡು ಅವರು, ಆ ದಿನ ಬಡವರ ದುಃಖ ದುಮ್ಮನಾಗಳನ್ನು ಅರಿತು ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವ ಪ್ರಯತ್ನಗಳನ್ನು ನಡೆಸಲಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.9 ಕೋಟಿ ಯನ್ನು ಬಡವರಿಗೆ ಹಂಚಿಕೆ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com