ನೆರೆ, ಪ್ರವಾಹ ತಡೆಗೆ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷಿ ನದಿ ಜೋಡಣೆ ಯೋಜನೆ

ದೇಶದ ಪ್ರಮುಖ ದೊಡ್ಡ ನದಿಗಳನ್ನು ಜೋಡಿಸುವ 87 ಶತಕೋಟಿ ಡಾಲರ್ ಮೊತ್ತದ ಯೋಜನೆಯ...
ಮಧ್ಯ ಪ್ರದೇಶದ ದೌದಾನ್ ಗ್ರಾಮದಲ್ಲಿರುವ ಗಂಗೌ ಅಣೆಕಟ್ಟಿನ ಒಂದು ನೋಟ
ಮಧ್ಯ ಪ್ರದೇಶದ ದೌದಾನ್ ಗ್ರಾಮದಲ್ಲಿರುವ ಗಂಗೌ ಅಣೆಕಟ್ಟಿನ ಒಂದು ನೋಟ
ದೌದ್ಹನ್(ಮಧ್ಯ ಪ್ರದೇಶ): ದೇಶದ ಪ್ರಮುಖ ದೊಡ್ಡ ನದಿಗಳನ್ನು ಜೋಡಿಸುವ 87 ಶತಕೋಟಿ ಡಾಲರ್ ಮೊತ್ತದ ಯೋಜನೆಯ ಕಾಮಗಾರಿಯನ್ನು ಇನ್ನು ಒಂದು ತಿಂಗಳಲ್ಲಿ ಆರಂಭಿಸಲಿದೆ.
ನೆರೆ ಪ್ರವಾಹ ಮತ್ತು ಬರಗಾಲಗಳನ್ನು ತಡೆಗಟ್ಟಲು ಪ್ರಧಾನಿ ಮೋದಿಯವರ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಈ ಮಹಾ ಯೋಜನೆಯು ಗಂಗಾ ನದಿ ಸೇರಿದಂತೆ ಸುಮಾರು 60 ನದಿಗಳನ್ನು ಜೋಡಿಸುವುದಾಗಿದೆ. ಇದರಿಂದ ರೈತರು ಬೆಳೆ ಬೆಳೆಯಲು ಮಳೆಯನ್ನು ಆಶ್ರಯಿಸುವುದನ್ನು ತಡೆಗಟ್ಟಬಹುದು. ರೈತರಿಗೆ ಕೃಷಿ ಕಾರ್ಯಕ್ಕೆ ಸಾಕಷ್ಟು ನೀರೊದಗಿಸುವುದು ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶವಾಗಿದೆ ಎಂದು ಸರ್ಕಾರ ಹೇಳುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಮಳೆ ಸುರಿಯದೆ ಬರಗಾಲ ಅನುಭವಿಸಿದ್ದರೆ ಇತ್ತೀಚಿನ ವಾರಗಳಲ್ಲಿ ಸತತ ಮಳೆಯಿಂದ ಭಾರತದ ಹಲವು ರಾಜ್ಯಗಳು, ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಅತ್ಯಧಿಕ ಮಳೆ ಬಂದು ನೆರೆ ಪ್ರವಾಹ ಉಂಟಾಗಿದೆ.
ನದಿ ಜೋಡಣೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದು ಅನುಮತಿ ನೀಡಿದ್ದಾರೆ. ಇದರಿಂದ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ನ್ನು ಕೂಡ ಉತ್ಪಾದಿಸಬಹುದು ಎನ್ನಲಾಗಿದೆ. ಆದರೂ ಈ ನದಿ ಜೋಡಣೆಗೆ ಪರಿಸರತಜ್ಞರು, ಹುಲಿ ಸಂರಕ್ಷಣೆಗಾರರು ಮದು ಮಾಜಿ ರಾಜಮನೆತನದ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆತ್ವಾಗೆ ಸಂಪರ್ಕ ಕಲ್ಪಿಸುವ 22 ಕಿಲೋ ಮೀಟರ್ ಉದ್ದದ ಕಾಲುವೆಗ ಉತ್ತರ-ಮಧ್ಯ ಭಾರತದ ಕೆನ್ ನದಿಗೆ ಅಣೆಕಟ್ಟು ಕಟ್ಟುವ ಯೋಜನೆ ಇದಾಗಿದೆ.
ಕೆನ್ ಮತ್ತು ಬೆತ್ವಾ ಎರಡೂ ನದಿಗಳು ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲಿ ಹರಿಯುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com