ರಾಮನಿಗೆ ಯಾವಾಗ ಬೇಕೋ ಆಗ ಮಂದಿರ ನಿರ್ಮಿಸುತ್ತೇವೆ ಮೋದಿಗೆ ಬೇಕಾದಾಗ ಅಲ್ಲ: ಸಿಬಲ್ ತಿರುಗೇಟು
ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿರುವ ಬೆನ್ನಲ್ಲೇ ಸಿಬಲ್ ಅವರನ್ನು ಖಂಡಿಸಿ ಹೇಳಿಕೆಗಳು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಕಪಿಲ್ ಸಿಬಲ್
ನವದೆಹಲಿ: ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿರುವ ಬೆನ್ನಲ್ಲೇ ಸಿಬಲ್ ಅವರನ್ನು ಖಂಡಿಸಿ ಹೇಳಿಕೆಗಳು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ.
ರಾಮ ಮಂದಿರವನ್ನು ರಾಮನಿಗೆ ಯಾವಾಗ ಬೇಕೋ ಆಗ ನಿರ್ಮಿಸುತ್ತೇವೆ ಪ್ರಧಾನಿ ಮೋದಿ ಅವರಿಗೆ ಬೇಕಾದಾಗ ಅಲ್ಲ, ನಾವು ರಾಮನನ್ನು ನಂಬಿದ್ದೇವೆ, ನಿಮ್ಮನ್ನಲ್ಲ(ಮೋದಿ) ನೀವು ಮಂದಿರ ನಿರ್ಮಿಸುವುದಿಲ್ಲ, ಮಂದಿರ ನಿರ್ಮಿಸುತ್ತೇವೆ ಎಂದುಕೊಂಡರೆ ಅದು ತಪ್ಪು ತಿಳುವಳಿಕೆ ಎಂದು ಕಪಿಲ್ ಸಿಬಲ್ ಪ್ರಧಾನಿಗೆ ಹೇಳಿದ್ದಾರೆ.
ಮಂದಿರ ಎಲ್ಲಿ ನಿರ್ಮಿಸಬೇಕು ಯಾವಾಗ ನಿರ್ಮಿಸಬೇಕು ಎಂಬುದು ರಾಮ ನಿರ್ಧರಿಸುತ್ತಾನೆ, ಕೋರ್ಟ್ ನಿರ್ಧರಿಸುತ್ತದೆ ಎಂದು ಸಿಬಲ್ ಹೇಳಿದ್ದಾರೆ. ರಾಮ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನ್ನಿ ವಕ್ಫ್ ಬೋರ್ಡ್ ನ್ನು ಪ್ರತಿನಿಧಿಸುತ್ತಿರುವ ಕಪಿಲ್ ಸಿಬಲ್ ಅಂತಿಮ ತೀರ್ಪನ್ನು 2019 ರ ಸಾರ್ವತ್ರಿಕ ಲೋಕಸಭೆ ಚುನಾವಣೆ ಬಳಿಕ ಪ್ರಕಟಿಸಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು. ಈ ಹೇಳಿಕೆಗೆ ಸುನ್ನಿ ವಕ್ಫ್ ಬೋರ್ಡ್ ಸಹ ಆಕ್ಷೇಪ ವ್ಯಕ್ತಪಡಿಸಿತ್ತು, ಸುನ್ನಿ ವಕ್ಫ್ ಬೋರ್ಡ್ ನಡೆಯನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದ್ದರು.