ಮಣಿಶಂಕರ್‌ ಅಯ್ಯರ್‌ ನನ್ನ ಹತ್ಯೆಗೆ ಪಾಕಿಸ್ತಾನಕ್ಕೆ ಸುಪಾರಿ ನೀಡಿದ್ದರು: ಪ್ರಧಾನಿ ಮೋದಿ

ತಮ್ಮನ್ನು 'ನೀಚ ಆದ್ಮಿ' ಎಂದು ಕರೆದಿದ್ದ ಕಾಂಗ್ರೆಸ್‌ ನಿಂದ ಅಮಾನತುಗೊಂಡಿರುವ ಮಣಿಶಂಕರ್‌ ಅಯ್ಯರ್‌ ಅವರು ನನ್ನ ಹತ್ಯೆಗಾಗಿ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 
ನವದೆಹಲಿ: ತಮ್ಮನ್ನು 'ನೀಚ ಆದ್ಮಿ' ಎಂದು ಕರೆದಿದ್ದ ಕಾಂಗ್ರೆಸ್‌ ನಿಂದ ಅಮಾನತುಗೊಂಡಿರುವ ಮಣಿಶಂಕರ್‌ ಅಯ್ಯರ್‌ ಅವರು ನನ್ನ ಹತ್ಯೆಗಾಗಿ ಪಾಕಿಸ್ತಾನಕ್ಕೆ ಸುಪಾರಿ ನೀಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆರೋಪಿಸಿದ್ದಾರೆ.
ಇಂದು ಗುಜರಾತ್‌ನಲ್ಲಿ ಚುನಾವಣೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮಣಿಶಂಕರ್ ಅಯ್ಯರ್‌ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿಯನ್ನು ಮುಗಿಸಿ ಬಿಡಿ. ಆಮೇಲೆ ನೋಡಿ ಭಾರತ-ಪಾಕಿಸ್ತಾನ ನಡುವೆ ಯಾವ ರೀತಿಯ ಶಾಂತಿ ಸ್ಥಾಪನೆ ಆಗುತ್ತದೆ ಎಂದು ಹೇಳಿದ್ದರು. ನಾನು ಮಾಡಿರುವ ತಪ್ಪಾದರೂ ಏನು? ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ.
ನಾನು ಕೇವಲ ಬಡತನದಿಂದ ಬಂದಿದ್ದೇನೆ. ಚಹಾ ಮಾರುತ್ತಿದ್ದೆ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್‌ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಮೋದಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯಾಗಬೇಕಾದರೆ ಏನು ಮಾಡಬೇಕು ಎಂದು ಪಾಕಿಸ್ತಾನದ ಚಾನೆಲ್‌ವೊಂದು ಮಣಿಶಂಕರ್‌ ಅಯ್ಯರ್‌ ಅವರನ್ನು ಕೇಳಿತ್ತು. ಅದಕ್ಕೆ ಮೊದಲು ಮೋದಿಯನ್ನು ಸರಿಸಿ. ನಂತರ ನಾವು ಮಾತನಾಡಬಹುದು ಎಂದಿದ್ದರು ಎಂದು ಪ್ರಧಾನಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com