ಮದುವೆ ನಂತರ ಮಹಿಳೆ ಧರ್ಮವನ್ನು ಬದಲಿಸಬೇಕೆಂದು ಕಾನೂನು ಹೇಳುವುದಿಲ್ಲ: ಸುಪ್ರೀಂ ಕೋರ್ಟ್

ಅಂತರ್ ಧರ್ಮೀಯ ವಿವಾಹವಾದರೆ ಪತ್ನಿ ಪತಿಯ ಧರ್ಮದ ಜೊತೆ ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಅಂತರ್ ಧರ್ಮೀಯ ವಿವಾಹವಾದರೆ ಪತ್ನಿ ಪತಿಯ ಧರ್ಮದ ಜೊತೆ ವಿಲೀನವಾಗಬೇಕು ಎಂದು ಯಾವುದೇ ಕಾನೂನು ಹೇಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಹೇಳಿದೆ.
ಬೇರೆ ಧರ್ಮದ ಪುರುಷನ ಜೊತೆ ವಿವಾಹವಾದ ನಂತರ ಮಹಿಳೆ ತನ್ನ ಧರ್ಮದ ಗುರುತನ್ನು ಕಳೆದುಕೊಳ್ಳುತ್ತಾಳೆ ಎಂದು ಯಾವುದೇ ಕಾನೂನು ಹೇಳುವುದಿಲ್ಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ವಿಶೇಷ ವಿವಾಹ ಕಾಯ್ದೆಯಡಿ ಬೇರೆ ಬೇರೆ ಧರ್ಮಗಳ ಪುರುಷ ಮತ್ತು ಸ್ತ್ರೀಯರು ಮದುವೆಯಾಗಬಹುದು ಮತ್ತು ತಮ್ಮ ಮೂಲ ಧರ್ಮವನ್ನು ಉಳಿಸಿಕೊಳ್ಳಬಹುದು ಎಂದು ನ್ಯಾಯಪೀಠ ಹೇಳಿದೆ.
ಪಾರ್ಸಿ ಧರ್ಮದ ಮಹಿಳೆ ಬೇರೆ ಧರ್ಮದ ಪುರುಷನನ್ನು ವಿವಾಹವಾದರೆ ತನ್ನ ಧರ್ಮವನ್ನು ಕಳೆದುಕೊಳ್ಳುತ್ತಾಳೆಯೇ ಎಂದು ಕೇಳಲಾದ ಪ್ರಶ್ನೆಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ಉತ್ತರಿಸಿದೆ.
ಗೂಲ್ರೊಕ್ ಎಂ.ಗುಪ್ತಾ ಎಂಬ ಪಾರ್ಸಿ ಮಹಿಳೆ ಹಿಂದೂವನ್ನು ಮದುವೆಯಾಗಿದ್ದು, ಆಕೆಯ ಪೋಷಕರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಬಿಡಬಾರದು ಎಂದು ವಲ್ಸದ್ ಪಾರ್ಸಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹಿರಿಯ ವಕೀಲರು ಈ ಹೇಳಿಕೆ ನೀಡಿದ್ದಾರೆ.
2010ರಲ್ಲಿ ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಗುಪ್ತಾ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಹಿಂದೂ ಧರ್ಮದವರನ್ನು ಮದುವೆಯಾದ ಪಾರ್ಸಿ ಮಹಿಳೆ ತನ್ನ ಧರ್ಮದ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ ಎಂದು ಅಂದು ಗುಪ್ತಾಗೆ ತನ್ನ ತಂದೆಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಬಿಟ್ಟಿರಲಿಲ್ಲ. ಗುಪ್ತಾ ಪರವಾಗಿ ಇಂದಿರಾ ಜೈಸಿಂಗ್ ಎಂಬ ವಕೀಲೆ ಧರ್ಮದ ವಿಲೀನದ ಸಾಮಾನ್ಯ ಕಾನೂನು ಸಿದ್ಧಾಂತದ ವಾದವನ್ನು ಮಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com