ಒಡಿಶಾ: ಆಸ್ಪತ್ರೆಗೆ ದಾಖಲಿಸಲು ನಕಾರ, ಚರಂಡಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಒಡಿಶಾದ ಕೋರಾಪುಟ್ ನಲ್ಲಿ ಹೆರಿಗೆಗೆ ಬಂದ ದಲಿತ ಮಹಿಳೆಯನ್ನು ಅಗತ್ಯ ದಾಖಲೆಗಳಿಲ್ಲವೆಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು....
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದು
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದು
Updated on: 
ಕೋರಾಪುಟ್‌: ಒಡಿಶಾದ ಕೋರಾಪುಟ್ ನಲ್ಲಿ ಹೆರಿಗೆಗೆ ಬಂದ ದಲಿತ ಮಹಿಳೆಯನ್ನು ಅಗತ್ಯ ದಾಖಲೆಗಳಿಲ್ಲವೆಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ, 30 ವರ್ಷದ ಮಹಿಳೆ ಚರಂಡಿಯಲ್ಲಿ ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ.
ಮಹಿಳೆಯ ಸಂಬಂಧಿಗಳ ಪ್ರಕಾರ, ಅಗತ್ಯ ದಾಖಲೆಗಳನ್ನು ನೀಡದ ಕಾರಣಕ್ಕೆ ಶಹೀದ್ ಲಕ್ಷ್ಮಣ್ ನಾಯಕ್ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದೆ. ಆದರೆ ಮಗುವಿಗೆ ಜನ್ಮ ನೀಡಿದ ಒಂದು ಗಂಟೆಯ ನಂತರ ಮಗು ಮತ್ತು ತಾಯಿಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. 
ಗರ್ಭಿಣಿ ಮಹಿಳೆ ತನ್ನ ತಾಯಿ ಮತ್ತು ತಂಗಿ ಜತೆಗೆ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಗಂಡನನ್ನು ನೋಡಲು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತು. ಆದರೆ ದಾಖಲೆಗಳಿಲ್ಲವೆಂದು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಿಲ್ಲ. ಇದರಿಂದಾಗಿ ಪಾಳುಬಿದ್ದ ಚರಂಡಿಯಲ್ಲಿ ಆ ಹೆಣ್ಣು ಮಗಳು ಮಗುವಿಗೆ ಜನ್ಮ ನೀಡಿದರು.
ಮಗುವನ್ನು ವಿಶೇಷ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಮತ್ತು ತಾಯಿಯನ್ನು ಸಾಮಾನ್ಯ ವಾರ್ಡ್ ನಲ್ಲಿ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ನಿರ್ದೇಶಕ ಸೀತಾರಾಮ್ ಮಹಾಪತ್ರ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com