ಜೂಜು, ಬೆಟ್ಟಿಂಗ್ ಕಾನೂನಾತ್ಮಕಗೊಳಿಸಿ: ಕಾನೂನು ಆಯೋಗ

ಜೂಜು, ಬೆಟ್ಟಿಂಗ್ ಪ್ರಕ್ರಿಯೆಯನ್ನು ಕಾನೂನಾತ್ಮಕಗೊಳಿಸಿ ಎಂದು ಕೇಂದ್ರ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜೂಜು, ಬೆಟ್ಟಿಂಗ್ ಪ್ರಕ್ರಿಯೆಯನ್ನು ಕಾನೂನಾತ್ಮಕಗೊಳಿಸಿ ಎಂದು ಕೇಂದ್ರ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಜೂಜು ಮತ್ತು ಬೆಟ್ಟಿಂಗ್ ನಂತಹ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲದಿರುವಾಗ ಅದನ್ನು ಕಾನೂನಾತ್ಮಕಗೊಳಿಸಿ ನಿಯಂತ್ರಿಸುವುದು ಉತ್ತಮ ಎಂದು ಕಾನಾನು ಆಯೋಗ ಅಭಿಪ್ರಾಯಪಟ್ಟಿದೆ. ಅಲ್ಲದೆ  ಈ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರಕ್ಕೆ ಕರಡು ಪ್ರತಿ ಸಲ್ಲಿಕೆ ಮಾಡುವುದಾಗಿಯೂ ಕಾನೂನು ಆಯೋಗ ಹೇಳಿದೆ.
ದೇಶದಲ್ಲಿ ಪ್ರತೀಯೊಂದು ಕ್ರೀಡೆಯಲ್ಲೂ ಬೆಟ್ಟಿಂಗ್ ನಡೆದಿರುವುದರ ಕುರಿತು ಮಾಹಿತಿ ಲಭ್ಯವಾಗುತ್ತಲೇ ಇರುತ್ತದೆ. ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ತೆರೆಮರೆಯಲ್ಲಿ ಇಂತಹ ಕಾರ್ಯಗಳು ನಡೆಯುತ್ತಿರುತ್ತವೆ. ಹೀಗಾಗಿ  ಇಂತಹ ಕೃತ್ಯಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲದಾಗ ಅವುಗಳಿಗೆ ಸಂಬಂಧಿಸಿದಂತೆ ಕಾನೂನು ತಂದು, ಅವುಗಳನ್ನು ನಿಯಂತ್ರಿಸಹುದು. ಇದರಿಂದ ಕಪ್ಪುಹಣ ಶೇಖರಣೆಗೆ ತಡೆ ಹಾಕಬಹುದು ಮತ್ತು  ಸರ್ಕಾರದ ಆದಾಯ ಕೂಡ ಹೆಚ್ಚಾಗುತ್ತದೆ ಎಂದು ಕಾನೂನು ಆಯೋಗ ಅಭಿಪ್ರಾಯವ್ಯಕ್ತಪಡಿಸಿದೆ.
ಕಾನೂನು ಆಯೋಗದ ಮಾಹಿತಿಯಂತೆ ಭಾರತದಲ್ಲಿ ಸರಿಸುಮಾರು 13 ಸಾವಿರ  ಕೋಟಿ ರು.ಹಣ ಬೆಟ್ಟಿಂಗ್ ನಲ್ಲಿ ತೊಡಗಿಸಲಾಗುತ್ತದೆ. ಭಾರತದಲ್ಲಿ ಬೆಟ್ಟಿಂಗ್ ನಿಷೇಧವಿದ್ದರೂ, ತೆರೆಮರೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣದ ಚಲಾವಣೆ ಭಾರತ ಆರ್ಥಿಕತೆ ಧಕ್ಕೆ ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com