ಎರಡು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದ ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಗುಜರಾತ್ ಮತ್ತು ಹಿಮಾಚಲದ ಜನತೆ ಅಭಿವೃದ್ಧಿ ಪರವಾಗಿ ಮತ್ತು ವಂಶಾಡಳಿತದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಪ್ರಧಾನಿ ಮೋದಿಯ ಅಭಿವೃದ್ಧಿಯ ಗೆಲುವು. ಪ್ರತಿಪಕ್ಷಗಳ ಒಡೆದು ಆಳುವ ನೀತಿಯನ್ನು ಜನ ಸಾರಾ ಸಗಟಾಗಿ ತಿರಸ್ಕಸಿದಿದ್ದಾರೆ ಎಂದಿದ್ದಾರೆ.