ಮುಸ್ಲಿಮರು ಹಿಂದೂ ಧರ್ಮವನ್ನು ತಮ್ಮದೇ ಧರ್ಮವೆಂದು ಪರಿಗಣಿಸಬೇಕು: ಆರ್ ಎಸ್ಎಸ್

ಭಾರತದಲ್ಲಿರುವ ಮುಸ್ಲಿಮರೂ ಹಿಂದೂಗಳೇ ಎಂಬ ಆರ್ ಎಸ್ಎಸ್ ನ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿಕೆ ಬೆನ್ನಲ್ಲೇ ಆರ್ ಎಸ್ಎಸ್ ನ ಮುಖಂಡ ಎಂಜಿ ವೈದ್ಯ ಮುಸ್ಲಿಮರು ಹಿಂದೂ ಧರ್ಮವನ್ನು...
ಎಂಜಿ ವೈದ್ಯ
ಎಂಜಿ ವೈದ್ಯ
Updated on: 
ತ್ರಿಪುರಾ: ಭಾರತದಲ್ಲಿರುವ ಮುಸ್ಲಿಮರೂ ಹಿಂದೂಗಳೇ ಎಂಬ ಆರ್ ಎಸ್ಎಸ್ ನ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿಕೆ ಬೆನ್ನಲ್ಲೇ ಆರ್ ಎಸ್ಎಸ್ ನ ಮುಖಂಡ ಎಂಜಿ ವೈದ್ಯ ಮುಸ್ಲಿಮರು ಹಿಂದೂ ಧರ್ಮವನ್ನು ತಮ್ಮದೇ ಧರ್ಮವೆಂದು ಪರಿಗಣಿಸಬೇಕು ಎಂದು ಕರೆ ನೀಡಿದ್ದಾರೆ. 
ಹಿಂದೂ ಆಗಿರಲು ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ತ್ಯಜಿಸಬೇಕಿಲ್ಲ. ಮುಸ್ಲಿಮರು ಹಿಂದೂ ಆಗಲು ಕುರಾನ್ ನ್ನು ಬಿಡಬೇಕಿಲ್ಲ, ಅವರು ಹಿಂದೂ ಧರ್ಮವನ್ನು ತಮ್ಮದೇ ಧರ್ಮವೆಂದು ಪರಿಗಣೀಸಬೇಕು ಎಂದಿದ್ದಾರೆ. ದೇವಾಲಯಕ್ಕೆ ಹೋಗದೇ ಇರುವವರೂ ಹಿಂದೂಗಳೆ, ಹಿಂದೂ ಎಂಬ ಪದದ ಅರ್ಥವನ್ನು ತಿಳಿಯಬೇಕು ಎಂದು ತ್ರಿಪುರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯ ಹೇಳಿದ್ದಾರೆ. ಭಾರತದಲ್ಲಿರುವ ಮುಸ್ಲಿಮರೂ ಹಿಂದೂಗಳು, ನಮಗೆ ಯಾರ ಮೇಲೂ ವೈರತ್ವವಿಲ್ಲ, ನಮಗೆ ಎಲ್ಲರ ಶ್ರೇಯೋಭಿವೃದ್ಧಿಯೂ ಬೇಕು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com