ಜಾದವ್ ಕುಟುಂಬವನ್ನು ಪಾಕ್ ನಡೆಸಿಕೊಂಡ ರೀತಿ ಅಮಾನವೀಯ: ಕಾಂಗ್ರೆಸ್

ಕುಲಭೂಷಣ್ ಜಾದವ್ ರನ್ನು ನೋಡಲು ತೆರಳಿದ್ದ ಅವರ ಕುಟುಂಬಸ್ಥರನ್ನು ಪಾಕಿಸ್ತಾನ ನಡೆಸಿಕೊಂಡ ರೀತಿ ಅಮಾನವೀಯ ಮತ್ತು ಸಹಿಸಲಸಾಧ್ಯ ಎಂದು ರಾಜ್ಯಸಭೆ ಕಲಾಪದಲ್ಲಿ ಕಾಂಗ್ರೆಸ್ ಹೇಳಿದೆ.
ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್
ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್
ನವದೆಹಲಿ: ಕುಲಭೂಷಣ್ ಜಾದವ್ ರನ್ನು ನೋಡಲು ತೆರಳಿದ್ದ ಅವರ ಕುಟುಂಬಸ್ಥರನ್ನು ಪಾಕಿಸ್ತಾನ ನಡೆಸಿಕೊಂಡ ರೀತಿ ಅಮಾನವೀಯ ಮತ್ತು ಸಹಿಸಲಸಾಧ್ಯ ಎಂದು ರಾಜ್ಯಸಭೆ ಕಲಾಪದಲ್ಲಿ ಕಾಂಗ್ರೆಸ್ ಹೇಳಿದೆ.
ಕುಲಭೂಷಣ್ ಜಾದವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು, ಕುಲಭೂಷಣ್ ಜಾದವ್ ರನ್ನು ನೋಡಲು ತೆರಳಿದ್ದ ಅವರ ತಾಯಿ ಆವಂತಿ  ಯಾದವ್ ಮತ್ತು ಪತ್ನಿ ಚೇತನಾ ಜಾದವ್ ರನ್ನು ಪಾಕಿಸ್ತಾನದ ಅಧಿಕಾರಿಗಳು ನಡೆಸಿಕೊಂಡ ರೀತಿ ಸರಿಯಿಲ್ಲ, ನಿಜಕ್ಕೂ ಅದೊಂದು ಅಮಾನವೀಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಕುಲಭೂಷಣ್ ಜಾದವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿದ ಬೆನ್ನಲ್ಲೇ ಅವರ ಮಾತಿಗೆ ಸಹಮತಿ ಸೂಚಿಸುತ್ತಾ ಮಾತನಾಡಿದ ಆಜಾದ್, ಜಾದವ್  ಕುಟುಂಬಸ್ಥರನ್ನು ಕೀಳಾಗಿ ಕಾಣುವ ಮೂಲಕ ಪಾಕಿಸ್ತಾನ ಎಲ್ಲ ಭಾರತೀಯರನ್ನೂ ಕೀಳಾಗಿ ಕಂಡಿದೆ. ರಾಜಕೀಯ ಭಿನ್ನಾಭಿಪ್ರಾಯದ ಹೊರತಾಗಿಯೂ ಪಾಕ್ ನಡೆಯನ್ನು ಖಂಡಿಸುತ್ತೇವೆ. ದೇಶದ ಗೌರವ ಮತ್ತು ಘನತೆಗೆ ಚ್ಟುತಿ  ಬಂದಾಗ ನಾವು ಒಂದಾಗ ಬೇಕಾಗುತ್ತದೆ. ಅಂತೆಯೇ ಮತ್ತೊಂದು ರಾಷ್ಟ್ರ ನಮ್ಮ ದೇಶದ ತಾಯಿ ಮತ್ತು ಸಹೋದರಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಾಗ ಅದನ್ನು ಒಕ್ಕೋರಲಿನಿಂದ ವಿರೋಧಿಸಬೇಕು ಎಂದು ಗುಲಾಂ  ನಬಿ ಆಜಾದ್ ಹೇಳಿದರು.
ಈ ಹಿಂದೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾದವ್ ಅವರನ್ನು ನೋಡಲು ಪೋಷಕರಿಗೆ ಅವಕಾಶ ಮಾಡಿಕೊಟ್ಟಿದ್ದ ಪಾಕಿಸ್ತಾನ, ಜಾದವ್ ತಾಯಿ ಮತ್ತು ಪತ್ನಿಯನ್ನು ಪಾಕಿಸ್ತಾನಕ್ಕೆ  ಕರೆಸಿಕೊಂಡು ಅಮಾನವೀಯವಾಗಿ ನಡೆಸಿಕೊಂಡಿತ್ತು. ಅವರ ಬಿಂದಿ, ತಾಳಿ ಮತ್ತು ಶೂ ತೆಗೆಸುವ ಮೂಲಕ ಅವಮಾನ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com