ಪಾಕ್ ಪೊಲೀಸರಿಗೆ 'ಜೈಹಿಂದ್' ಹೇಳುವಂತೆ ಒತ್ತಾಯಿಸಿ ಸತತ ಫೋನ್ ಕರೆ!

ಇಸ್ಲಾಮಾಬಾದ್ ಪೊಲೀಸ್ ಕಂಟ್ರೋಲ್ ರೂಂಗೆ ಪದೇ ಪದೇ ಕರೆ ಮಾಡಿ ಜೈ ಹಿಂದ್ ಘೋಷಣೆ ಕೂಗಿದ್ದಲ್ಲದೆ, ಕರೆ ಸ್ವೀಕರಿಸಿದ ಸಿಬ್ಬಂದಿಗೂ ಜೈ ಹಿಂದ್ ಕೂಗುವಂತೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಇಸ್ಲಾಮಾಬಾದ್ ಪೊಲೀಸ್ ಕಂಟ್ರೋಲ್ ರೂಂಗೆ ಪದೇ ಪದೇ ಕರೆ ಮಾಡಿ ಜೈ ಹಿಂದ್ ಘೋಷಣೆ ಕೂಗಿದ್ದಲ್ಲದೆ, ಕರೆ ಸ್ವೀಕರಿಸಿದ ಸಿಬ್ಬಂದಿಗೂ ಜೈ ಹಿಂದ್ ಕೂಗುವಂತೆ ಒತ್ತಾಯಿಸಿದ ಎಂಬ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲಿಸಿದ್ದಾರೆ. 
ಡಿಸೆಂಬರ್ 25ರಂದು ಅಪರಿಚಿತ ವ್ಯಕ್ತಿಯೊಬ್ಬರು ಪದೇ ಪದೇ ಕರೆ ಮಾಡಿ ಜೈ ಹಿಂದ್ ಘೋಷಣೆ ಕೂಗಿದ್ದು ಅಲ್ಲ ನೀವು ಜೈ ಹಿಂದ್ ಘೋಷಣೆ ಕೂಗಿ ಎಂದು ಒತ್ತಾಯಿಸಿದ್ದರಿಂದ ಆತ ಭಾರತೀಯನಿರಬೇಕು ಎಂದು ಆತನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪಾಕಿಸ್ತಾನದ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. 
ಡಿಸೆಂಬರ್ 25ರಂದು ಬೆಳಗಿನ ಜಾವ 3.30ರ ಸುಮಾರಿಗೆ ವ್ಯಕ್ತಿಯೊಬ್ಬ ಪದೇ ಪದೇ ಕರೆ ಮಾಡುತ್ತಿದ್ದ. ನಂತರ ತಾನು ಐಜಿಪಿ ಮತ್ತು ಡಿಐಜಿ ಜತೆ ಮಾತನಾಡಬೇಕು ಎಂದು ಹೇಳಿದ್ದಾನೆ. ಆತನ ಕೋರಿಕೆಯನ್ನು ತಿರಸ್ಕರಿಸಿದಾಗ ಆತ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸತೊಡಗಿದ ಎಂದು ಸಬ್ ಇನ್ಸ್ ಪೆಕ್ಟರ್ ಹೇಳಿರುವುದಾಗಿ ಟ್ರಿಬ್ಯೂನ್ ವರದಿಯಲ್ಲಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com