ಮುಂಬೈ ಅಗ್ನಿ ದುರಂತ: ಉಸಿರುಗಟ್ಟಿದ ಪರಿಣಾಮ ಜನರು ಸಾವನ್ನಪ್ಪಿದ್ದಾರೆ-ವೈದ್ಯರು

ವಾಣಿಜ್ಯ ನಗರಿ ಮುಂಬೈನ ಕಮಲಾ ಮಿಲ್ ಕಂಪೌಂಡ್'ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಉಸಿರುಗಟ್ಟಿದ ಪರಿಣಾಮ ಜನರು ಸಾವನ್ನಪ್ಪಿದ್ದಾರೆಂದು ವೈದ್ಯರು ಶುಕ್ರವಾರ ಹೇಳಿದ್ದಾರೆ...
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಆ್ಯಂಬುಲೆನ್ಸ್
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಆ್ಯಂಬುಲೆನ್ಸ್
ಮುಂಬೈ: ವಾಣಿಜ್ಯ ನಗರಿ ಮುಂಬೈನ ಕಮಲಾ ಮಿಲ್ ಕಂಪೌಂಡ್'ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಉಸಿರುಗಟ್ಟಿದ ಪರಿಣಾಮ ಜನರು ಸಾವನ್ನಪ್ಪಿದ್ದಾರೆಂದು ವೈದ್ಯರು ಶುಕ್ರವಾರ ಹೇಳಿದ್ದಾರೆ. 
ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ 14 ಮಂದಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿರುವ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯ ವೈದ್ಯ ಡಾ.ರಾಜೇಶ್ ಡೆರೆ ಅವರು ಮಾತನಾಡಿ, ಅಗ್ನಿ ದುರಂತ ಸಂಭವಿಸಿದ ಪರಿಣಾಮ ಉಸಿರುಗಟ್ಟಿ ಜನರು ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. 
ಮುಂಬೈನ ಕಮಲಾ ಮಿಲ್ ನಲ್ಲಿ ಶುಕ್ರವಾರ ನಸುಕಿನ ವೇಳೆ ತಡರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ನಾಲ್ಕು ಮಹಡಿಯ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದ ಪರಿಣಾಮ ಕಟ್ಟಡದಲ್ಲಿದ್ದ 14 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ 14 ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ 14 ಮಂದಿಯ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ 
ಕಟ್ಟಡದಲ್ಲಿ ಹಲವು ವಾಣಿಜ್ಯ ಮಳಿಗೆಗಳು, ಹೋಟೆಲ್ ಗಳು ಹಾಗೂ ಕೆಲ ಟಿವಿ ಚಾನೆಲ್ ಗಳ ಟ್ರಾನ್ಸ್ ಮಿಷನ್ ಗಳೂ ಕೂಡ ಇದ್ದವು. ಕಟ್ಟಡಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಚಾನೆಲ್ ಗಳು ಹಾಗೂ ವಾಣಿಜ್ಯ ಮಳಿಗೆಗಳ ಮೇಲೂ ಗಂಭೀರ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com