ಲಖನೌ: ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಶಹದಟಗಂಜ್ ಮದರಸಾ ಮ್ಯಾನೇಜರ್ ನನ್ನು ಶುಕ್ರವಾರ ಬಂಧಿಸಲಾಗಿದೆ.
ಮದರಸಾದಲ್ಲಿನ ಕೆಲವು ಬಾಲಕಿಯರು ಮ್ಯಾನೇಜರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ ನಂತರ, ಲಖನೌ ಪೊಲೀಸರು ಮದರಸಾ ಮೇಲೆ ದಾಳಿ ನಡೆಸಿದ್ದು, ಹಲವು ಬಾಲಕಿಯರನ್ನು ರಕ್ಷಿಸಿದ್ದಾರೆ.
ಈ ಮದರಸಾದಲ್ಲಿ ಒಟ್ಟು 125 ಬಾಲಕಿಯರು ಅಭ್ಯಾಸ ಮಾಡುತ್ತಿದ್ದು, ದಾಳಿ ನಡೆಸಿದ ವೇಳೆ ಕೇವಲ 51 ಬಾಲಕಿಯರು ಮಾತ್ರ ಇದ್ದರು ಎಂದು ಲಖನೌ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ಅವರು ತಿಳಿಸಿದ್ದಾರೆ.
ಪೊಲೀಸರು ಬಾಲಕಿಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಈ ಕುರಿತು ಮಕ್ಕಳ ಕಲ್ಯಾಣ ಸಮಿತಿಗೂ ವರದಿ ನೀಡುವುದಾಗಿ ಅವರು ಹೇಳಿದ್ದಾರೆ.