ಸಿಬಿಐ ಟೆಕ್ಕಿ ಬಂಧನ: ತತ್ಕಾಲ್ ರೈಲು ಟಿಕೆಟ್ ಸಾಫ್ಟ್ ವೇರ್ ತಪಾಸಣೆಗೆ

ರೈಲು ಟಿಕೆಟ್ ವ್ಯವಸ್ಥೆಯನ್ನು ತೆಗೆದುಹಾಕಿದ್ದಕ್ಕೆ ಸಿಬಿಐಯ ತಾಂತ್ರಿಕ ಅಧಿಕಾರಿಯನ್ನು ಬಂಧಿಸಿದ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ರೈಲು ಟಿಕೆಟ್ ವ್ಯವಸ್ಥೆಯನ್ನು ತೆಗೆದುಹಾಕಿದ್ದಕ್ಕೆ ಸಿಬಿಐಯ ತಾಂತ್ರಿಕ ಅಧಿಕಾರಿಯನ್ನು ಬಂಧಿಸಿದ ಪ್ರಕರಣದ ನಂತರ ಇದೀಗ ಹಲವು ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುವ ಆನ್ ಲೈನ್ ಸಾಫ್ಟ್ ವೇರ್ ಗಳು ಸಿಬಿಐ ತಪಾಸಣೆಗೊಳಪಟ್ಟಿವೆ.
ಸಿಬಿಐ ಅಧಿಕಾರಿಗಳು, ಹೀಗೆ ಆನ್ ಲೈನ್ ನಲ್ಲಿ ಸುಲಭವಾಗಿ ಸಿಗುವ ಹತ್ತಾರು ಸಾಫ್ಟ್ ವೇರ್ ಗಳನ್ನು ಕಂಡುಹಿಡಿದಿದ್ದಾರೆ.ರೈಲ್ವೆ ಟಿಕೆಟ್ ವ್ಯವಸ್ಥೆಯನ್ನು ಪತ್ತೆಹಚ್ಚಲು ಈ ಸಾಫ್ಟ್ ವೇರ್ ನ್ನು ಬಳಸಲಾಗುತ್ತಿದ್ದು, ಸಾಫ್ಟ್ ವೇರ್ ಮೂಲಕ ರೈಲ್ವೆ ಟಿಕೆಟ್ ವ್ಯವಸ್ಥೆಯನ್ನು ತ್ವರಿತಗೊಳಿಸುವುದಲ್ಲದೆ ಹಲವು ಟಿಕೆಟ್ ಗಳನ್ನು ಕಾಯ್ದಿರಿಸಬಹುದು ಎಂದು ಸಿಬಿಐ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿವೆ.
ಟ್ರಾವಲ್ ಏಜೆಂಟರಿಗೆ ಸಾಫ್ಟ್ ವೇರ್ ನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿದ್ದ ಸಹಾಯಕ ಪ್ರೋಗ್ರಾಮರ್ ಅಜಯ್ ಗಾರ್ಗ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಆನ್ ಲೈನ್ ಸಿಗುವ ಹಲವು ಪ್ರೊಗ್ರಾಂಗಳಲ್ಲಿ ನಿಯೊ ಸಾಫ್ಟ್ ವೇರ್ ನ್ನು ಗಾರ್ಗ್ ಅಭಿವೃದ್ಧಿಪಡಿಸಿದ್ದರು. ಈ ಎಲ್ಲಾ ಸಾಫ್ಟ್ ವೇರ್ ಗಳು ಇದೀಗ ತಪಾಸಣೆಯಲ್ಲಿದ್ದು ಅವುಗಳನ್ನು ಪರೀಕ್ಷಿಸಿದ ನಂತರ ಕಾರ್ಯನಿರ್ವಹಣೆಯಲ್ಲಿ ಸದ್ಯದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com