ನವದೆಹಲಿ: ಮೆಗಾಸ್ಟಾರ್ ರಜನಿಕಾಂತ್ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವ ನಿರ್ಧಾರಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಶುಭ ಕೋರಿದ್ದಾರೆ.
ತಮ್ಮ ಸ್ನೇಹಿತನಿಗೆ ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿರುವ ಅವರು, ನನ್ನ ಸ್ನೇಹಿತ, ಸಹೋದ್ಯೋಗಿ ಮತ್ತು ವಿನಮ್ರ ಮನುಷ್ಯ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಘೋಷಣೆ ಮಾಡಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಥಗ್ಸ್ ಆಫ್ ಹಿಂದೊಸ್ತಾನ್ ಮತ್ತು 102 ನಾಟ್ ಔಟ್ ಚಿತ್ರಗಳಲ್ಲಿ ಬಿಗ್ ಬಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರೀಕರಣ ಸೆಟ್ ನಲ್ಲಿ ಭಾರದ ವಸ್ತುವನ್ನು ಎತ್ತಲು ಹೋಗಿ ಅವರ ಎಡಗೈ ನೋವು ಮರುಕಳಿಸಿದೆ.
ರಜನಿಕಾಂತ್ ಅವರ ಬಹು ನಿರೀಕ್ಷಿತ 2.0 ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಇದು 2010ರ ರೊಬೊಟ್ ಚಿತ್ರದ ಮುಂದುವರಿದ ಭಾಗವಾಗಿದ್ದು ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ ಕೂಡ ನಟಿಸಿದ್ದಾರೆ.