ನೋಟು ನಿಷೇಧ ಸಂಬಂಧ 2016ರ ಫೆಬ್ರವರಿಯಿಂದಲೇ ಆರ್ ಬಿಐ ನೊಂದಿಗೆ ಚರ್ಚೆ: ಅರುಣ್ ಜೇಟ್ಲಿ

ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ನೋಟು ನಿಷೇಧ ಪ್ರಕ್ರಿಯೆ ದಿಢೀರ್ ನಿರ್ಧಾರವಲ್ಲ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಲಾಗಿತ್ತು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ರಾಜ್ಯ ಸಭೆಯಲ್ಲಿ ಅರುಣ್ ಜೇಟ್ಲಿ
ರಾಜ್ಯ ಸಭೆಯಲ್ಲಿ ಅರುಣ್ ಜೇಟ್ಲಿ

ನವದೆಹಲಿ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ನೋಟು ನಿಷೇಧ ಪ್ರಕ್ರಿಯೆ ದಿಢೀರ್ ನಿರ್ಧಾರವಲ್ಲ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಲಾಗಿತ್ತು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಇಂದು ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, 2016ರ ಫೆಬ್ರವರಿಯಿಂದಲೇ ಕೇಂದ್ರ ಸರ್ಕಾರ ಹಾಗೂ ಆರ್  ಬಿಐ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿ ಆ ಬಳಿಕವೇ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

"ನವೆಂಬರ್ 8ರಂದು ನೋಟು ನಿಷೇಧ ನಿರ್ಧಾರ ಘೋಷಣೆ ಮಾಡುವ ಮೊದಲೂ ಕೂಡ ಆರ್ ಬಿಐನ 10 ನಿರ್ದೇಶಕರನ್ನು ಕರೆಸಿ ಅಂತಿಮ ಸ್ವತಂತ್ರ್ಯಶಿಫಾರಸ್ಸು ಕೇಳಲಾಗಿತ್ತು. ಮೇ 2016ರಲ್ಲಿ ಆರ್ ಬಿಐ ಮಂಡಳಿ ಹೆಚ್ಚಿನ  ಮೌಲ್ಯದ ನೋಟುಗಳಿಗೆ ಬದಲೀ ನೋಟುಗಳ ವ್ಯವಸ್ಥೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ನೋಟಿನ ವಿನ್ಯಾಸ ಹಾಗೂ ಸುರಕ್ಷತೆ ಕುರಿತಂತೆಯೂ ಸಾಕಷ್ಟು ಚರ್ಚೆ ನಡೆಸಲಾಗಿತ್ತು. ಹೀಗಾಗಿ ನೋಟು ನಿಷೇಧ ನಿರ್ಧಾರ  ದಿಢೀರ್ ನಿರ್ಧಾರವಲ್ಲ. ಈ ಸಂಬಂಧ ಸಾಧಕ-ಬಾಧಕಗಳನ್ನು ಚರ್ಚಿಸಿಯೇ ಕಠಿಣ ನಿರ್ಧಾರ ಕೈಗೊಳ್ಳಲಾಗಿತ್ತು. ಅಲ್ಲದೆ ಈ ನಿರ್ಧಾರದ ಸಂಬಂಧ ರಹಸ್ಯ ಕಾಯ್ದುಕೊಳ್ಳುವುದೂ ಕೂಡ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು ಎಂದು  ಹೇಳಿದ್ದಾರೆ.

ಅಂತೆಯೇ ನೋಟು ನಿಷೇಧದ ಬಳಿಕ ಆರ್ ಬಿಐ ಕೈಗೊಂಡ ವಿವಿಧ ನಿರ್ಧಾರಗಳಲ್ಲಿ ಸರ್ಕಾರದ ಪಾತ್ರವಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಆರ್ ಬಿಐ ಮಂಡಳಿ ಒಂದು ಸ್ವತಂತ್ರ್ಯ ಸಂಸ್ಥೆಯಾಗಿದೆ. ಅಂದಿನ ಪರಿಸ್ಥಿತಿಗೆ  ತಕ್ಕಂತೆ ಯಾವುದು ಸೂಕ್ತ ನಿರ್ಣಯವೋ ಅದನ್ನು ಆರ್ ಬಿಐ ಮಾಡಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com