ಫೇಸ್'ಬುಕ್ ಪ್ರೀತಿ: ಹಿಂದೂ ಸಂಪ್ರದಾಯದಂತೆ ಭಾರತೀಯ ವರನ ಕೈಹಿಡಿದ ಅಮೆರಿಕಾ ಯುವತಿ!

ಪ್ರೀತಿಗೆ ಧರ್ಮ, ಜಾತಿ, ವರ್ಣಗಳೆಂಬ ಯಾವುದೇ ಕಟ್ಟಳೆಗಳಿಲ್ಲ ಎಂಬುದನ್ನು ಅಮೆರಿಕ ಮೂಲದ ಯುವತಿಯೊಬ್ಬಳು ಸಾಬೀತು ಪಡಿಸಿದ್ದಾಳೆ. ಫೇಸ್'ಬುಕ್ ಮೂಲಕ ಪರಿಚಯವಾದ ಭಾರತೀಯ ಯುವಕನೊಬ್ಬನನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬುಂದಿ: ಪ್ರೀತಿಗೆ ಧರ್ಮ, ಜಾತಿ, ವರ್ಣಗಳೆಂಬ ಯಾವುದೇ ಕಟ್ಟಳೆಗಳಿಲ್ಲ ಎಂಬುದನ್ನು ಅಮೆರಿಕ ಮೂಲದ ಯುವತಿಯೊಬ್ಬಳು ಸಾಬೀತು ಪಡಿಸಿದ್ದಾಳೆ. ಫೇಸ್'ಬುಕ್ ಮೂಲಕ ಪರಿಚಯವಾದ ಭಾರತೀಯ ಯುವಕನೊಬ್ಬನನ್ನು ಅಮೆರಿಕ ಮೂಲದ ಯುವತಿಯೊಬ್ಬಳು ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಮೆರಿಕ ಮೂಲಕ ಜೆಸ್ಸಿಕಾ ಜೋನೆಸ್ ಹಾಗೂ ರಾಜಸ್ತಾನ ಮೂಲದ ಅಂಕಿತ್ ಗುಪ್ತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳಾಗಿದ್ದಾರೆ. ಜೆಸ್ಸಿಕಾ ಹಾಗೂ ಅಂಕಿತ್ ಇಬ್ಬರೂ ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದರು. ಇಬ್ಬರ ನಡುವಿನ ಸ್ನೇಹ ದಿನ ಕಳೆಯುತ್ತಿದ್ದಂತೆ ಪ್ರೀತಿಗೆ ತಿರುಗಿತ್ತು. ರಾಜಸ್ತಾನದ ಬುಂದಿ ನಿವಾಸಿಯಾಗಿರುವ ಅಂಕಿತ್ ಪ್ರಸ್ತುತ ವಾಷಿಂಗ್ಟನ್ ನಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

ಜೆಸ್ಸಿಕಾ ಕೂಡ ವಾಷಿಂಗ್ಟನ್ ನಲ್ಲಿಯೇ ವಾಸವಾಗಿದ್ದಾರೆ. ಜೆಸ್ಸಿಕಾ ಅವರು ಭಾರತ ಮತ್ತು ಭಾರತೀಯ ಸಂಪ್ರದಾಯಕ್ಕೆ ಮಾರುಹೋಗಿದ್ದರು.

ಭಾರತದಲ್ಲಿರುವುದು ನಿಜಕ್ಕೂ ಬಹಳ ಸಂತೋಷವಾಗುತ್ತಿದೆ. ಭಾರತ ಅತ್ಯಂತ ಸುಂದರವಾದ ದೇಶ. ನನ್ನ ವಿವಾಹ ಭಾರತದಲ್ಲಿ ಆಗುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಭಾರತದಲ್ಲಿನ ಸಂಸ್ಕೃತಿ, ಪರಂಪರೆ ಹಾಗೂ ಇತೀಹಾಸ ನನಗೆ ಬಹಳ ಇಷ್ಟ. ನಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುತ್ತಿರುವುದಕ್ಕೆ ಬಹಳ ಸಂತಸವಿದೆ ಎಂದು ಜೆಸ್ಸಿಕಾ ಹೇಳಿದ್ದಾರೆ.

ಜೆಸ್ಸಿಕಾ ಹಾಗೂ ಅಂಕಿತ್ ಇಬ್ಬರೂ ಮದುವೆ ನಿರ್ಧಾರ ಕೈಗೊಂಡಾಗ ಉಭಯ ಕುಟುಂಬಗಳು ವಿವಾಹಕ್ಕೆ ನಿರಾಕರಿಸಿತ್ತು. ನಂತರ ದಿನಗಳಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ, ಮದುವೆ ಹಿಂದೂ ಸಂಪ್ರದಾಯದಂತೆಯೇ ಆಗಬೇಕು ಎಂದು ಹೇಳಿದ್ದಾರೆ. ಇದರಂತೆ ಇಬ್ಬರ ಮದುವೆ ನಿನ್ನೆ ಭಾರತೀಯ ಸಂಪ್ರದಾಯದಂತೆಯೇ ನೆರವೇರಿದೆ.

ಭಾರತದ ಧರ್ಮ ಅತ್ಯಂತ ಹಳೆಯ ಧರ್ಮವಾಗಿದ್ದು, ಅತ್ಯಂತ ಸುಂದರವಾದ ಧರ್ಮವಾಗಿದೆ. ಇಲ್ಲಿನ ಪ್ರತೀಯೊಬ್ಬ ವ್ಯಕ್ತಿ ಕೂಡ ಸ್ನೇಹಿತರಂತೆ ನಡೆದುಕೊಳ್ಳುತ್ತಾರೆ. ಬಹಳ ಸಂತೋಷವಾಗುತ್ತಿದೆ ಎಂದು ಜೆಸ್ಸಿಕಾ ತಂದೆ ಹೇಳಿದ್ದಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ ಪೂರ್ಣಗೊಳಿಸಿದ್ದ ಅಂಕಿತ್ ನಂತರ ಅಮೆರಿಕಾದಲ್ಲಿ ನೆಲೆಯೂರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com