ಗಣರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪಕ್ಷಪಾತ: ಮೋದಿಗೆ ಪತ್ರ ಬರೆದ ರಾಜ್ಯದ ಕಲಾವಿದರು

ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳು ಹಾಗೂ ಜಾನಪದ ಕಲಾವಿದರಿಗೆ ನೀಡುವ ಬಹುಮಾನದಲ್ಲಿ ಪಕ್ಷಪಾತ ಮಾಡಲಾಗಿದ್ದು, ಅಕ್ರಮಗಳನ್ನು ನಡೆಸಲಾಗಿದೆ ಎಂದು ರಾಜ್ಯದ ಹಲವಾರು ಕಲಾವಿದರು ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ...
ಜನವರಿ 26ರಂದು ರಾಜಧಾನಿ ದೆಹಲಿಯಲ್ಲಿ ನಡೆದ ಪರೇಡ್ ನಲ್ಲಿ ಕರ್ನಾಟಕದ ಕಲಾವಿದರು
ಜನವರಿ 26ರಂದು ರಾಜಧಾನಿ ದೆಹಲಿಯಲ್ಲಿ ನಡೆದ ಪರೇಡ್ ನಲ್ಲಿ ಕರ್ನಾಟಕದ ಕಲಾವಿದರು

ನವದೆಹಲಿ: ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳು ಹಾಗೂ ಜಾನಪದ ಕಲಾವಿದರಿಗೆ ನೀಡುವ ಬಹುಮಾನದಲ್ಲಿ ಪಕ್ಷಪಾತ ಮಾಡಲಾಗಿದ್ದು, ಅಕ್ರಮಗಳನ್ನು ನಡೆಸಲಾಗಿದೆ ಎಂದು ರಾಜ್ಯದ ಹಲವಾರು ಕಲಾವಿದರು ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಪತ್ರವನ್ನು ಬರೆದು ದೂರು ನೀಡಿದ್ದಾರೆಂದು ತಿಳಿದುಬಂದಿದೆ.

ದೆಹಲಿಯಲ್ಲಿ ನಡೆದ ಪರೇಡ್ ನಲ್ಲಿ ಭಾಗವಹಿಸಿದ್ದ ರಾಜ್ಯ ಕಲಾವಿದರು ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರವನ್ನು ಬರೆದಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿದ್ದಾರೆ.

ಪರೇಡ್ ನ ಬಹುಮಾನಗಳು ಹಾಗೂ ಸ್ತಬ್ಧ ಚಿತ್ರ ಪ್ರದರ್ಶನಗಳ ವಿಷಯದಲ್ಲಿ ಕೆಲ ಗುತ್ತಿಗೆದಾರರು ಹಾಗೂ ರಕ್ಷಣಾ ಸಂಸ್ಥೆಗಳ ನಡುವೆ ಅಪವಿತ್ರ ಮೈತ್ರಿ ಇದೆ. ಬಹುಮಾನ ಆಯ್ಕೆಯಲ್ಲಿ ಮತ್ತು ನಿರ್ಣಯ ಪ್ರಕ್ರಿಯೆಗಳಲ್ಲಿ ಭಾರೀ ರಾಜಕೀಯ ಮಾಡುತ್ತಿದ್ದು, ಇದು ಸೂಕ್ತವಲ್ಲ ಎಂಬುದು ನಮ್ಮ ಅನಿಸಿಕೆಯಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಸೂಚನೆ ನೀಡಬೇಕಿದ್ದು, ಈ ಮೂಲಕ ಗಣರಾಜ್ಯೋತ್ಸವದ ಸಂಭ್ರದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತೊಲಗಿಸಬೇಕಿದೆ ಎಂದು ಆಗ್ರಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com