ಪನ್ನೀರ್ ಸೆಲ್ವಂ
ಪನ್ನೀರ್ ಸೆಲ್ವಂ

ಪನ್ನೀರ್ ಸೆಲ್ವಂ ತಮ್ಮ ರಾಜಿನಾಮೆ ಹಿಂತೆಗೆದುಕೊಳ್ಳಬಹುದೇ? ಕಾನೂನು ತಜ್ಞರ ಅಭಿಪ್ರಾಯ ಹೀಗಿದೆ

ಪನ್ನೀರ್ ಸೆಲ್ವಂ ರಾಜಿನಾಮೆ ವಾಪಸ್ ಪಡೆದು ಸಿಎಂ ಆಗಬಹುದು, ಆದರೆ ಅದಕ್ಕೆ ಕೆಲವೊಂದು ಷರತ್ತುಗಳಿವೆ...

ಚೆನ್ನೈ: ಸಿಎಂ ಹುದ್ದೆ ಆಕಾಂಕ್ಷಿಯಾಗಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಲಿದ್ದಾರೆ, ಈ ಹಿನ್ನೆಲೆಯಲ್ಲಿ ಸದ್ಯ ಹಂಗಾಮಿ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿರುವ ಪನ್ನೀರ್ ಸೆಲ್ವಂ ತಮ್ಮ ರಾಜೀನಾಮೆ ಹಿಂತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆಗೆ ತಜ್ಞರು ಈ ರೀತಿ ಉತ್ತರಿಸಿದ್ದಾರೆ.

ಮಂಳವಾರ ರಾತ್ರಿ ಜಯಲಲಿತಾ ಸಮಾಧಿ ಬಳಿ ಧ್ಯಾನ ಮಾಡಿದ ನಂತರ ತಾವು ರಾಜಿನಾಮೆ ಹಿಂಪಡೆಯುವುದಾಗಿ ಪನ್ನೀರ್ ಸೆಲ್ವಂ ಸುಳಿವು ನೀಡಿದ್ದರು. ಅದರಂತೆ ಸೆಲ್ವಂ ರಾಜಿನಾಮೆ ವಾಪಸ್ ಪಡೆದು ಮತ್ತೆ ಮುಖ್ಯಮಂತ್ರಿಯಾಗಲು ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದಕ್ಕೆ ಕಾನೂನು ತಜ್ಞರು ಅಭಿಪ್ರಾಯ ಇಲ್ಲಿದೆ.

ಪನ್ನೀರ್ ಸೆಲ್ವಂ ರಾಜಿನಾಮೆ ವಾಪಸ್ ಪಡೆದು ಸಿಎಂ ಆಗಬಹುದು, ಆದರೆ ಅದಕ್ಕೆ ಕೆಲವೊಂದು ಷರತ್ತುಗಳಿವೆ, ಅವುಗಳೆಂದರೇ....

 ಸೆಲ್ವಂ ಅವರ ರಾಜಿನಾಮೆ ವಾಪಸ್ ಪಡೆದು ಸಿಎಂ ಆಗಿ ಅಧಿಕಾರದಲ್ಲಿ ಮುದುವರಿಯುವ ನಿರ್ಧಾರ ರಾಜ್ಯಪಾಲರ ಕೈಯ್ಯಲ್ಲಿದೆ. ರಾಜಿನಾಮೆ ಅಂಗೀಕರಿಸುವ ಅಥವಾ ತಿರಸ್ಕರಿಸುವ ಎರಡು ಅವಕಾಶಗಳು ಗವರ್ನರ್ ಗೆ ಬಿಟ್ಟದ್ದು.

ಒತ್ತಡ, ವಂಚನೆಯಿಂದ ತಾವು ರಾಜಿನಾಮೆ ನೀಡಿದ್ದು ಎಂಬುದನ್ನು ಸಾಬೀತು ಪಡಿಸಿದರೇ ರಾಜ್ಯಪಾಲರು ಆ ರಾಜಿನಾಮೆಯನ್ನು ಅಂಗಿಕರಿಸದೇ ವಿತ್ ಡ್ರಾ ಮಾಡಲು ಅವಕಾಶವಿರುತ್ತದೆ. ಈ ಕೇಸಲ್ಲಿ ಪನ್ನೀರ್ ಸೆಲ್ವಂ ತಾವು ಮತ್ತೊಬ್ಬರ ಬಲವಂತಕ್ಕಾಗಿ ರಾಜಿನಾಮೆ ನೀಡಿದ್ದು ಎಂಬುದನ್ನು ಸಾಬಿತು ಪಡಿಸಿದರೇ ಮತ್ತೆ ಸಿಎಂ ಆಗಿ ಮುಂದುವರಿಯಬಹುದು ಎಂದು ಮದ್ರಾಸ್ ಹೈಕೋರ್ಟ್ ಮಾಜಿ ಜಡ್ಜ್ ಟಿ.ಎನ್ ವಲ್ಲಿನಾಯಗನ್ ಅಭಿಪ್ರಾಯ.

ಪನ್ನೀರ್ ಸೆಲ್ವಂ ಅವರನ್ನು ಮತ್ತೆ ಸಿಎಂ ಹುದ್ದೆಯಲ್ಲಿ ಮುಂದುವರಿಸುವ ಸ್ವಾತಂತ್ರ್ಯ ಗವರ್ನರ್ ಅವರಿಗಿರುತ್ತದೆ. ಒಂದು ವೇಳೆ ಪಕ್ಷದ ಎಲ್ಲಾ ಶಾಸಕರು ಸೆಲ್ವಂ ಅವರ ಪರ ಇಲ್ಲ ಎಂದು ರಾಜ್ಯಪಾಲರಿಗೆ ಅನಿಸಿದರೇ  ಬಹುಮತ ಸಾಬೀತು ಪಡಿಸುವಂತೆ ಸೂಚಿಸಬಹುದು. ಅದರ ನಂತರ ಸೆಲ್ವಂ ಸಿಎಂ ಆಗಿ ಮುಂದು ವರಿಯಬಹುದು.

ಒಂದು ವೇಳೆ ಶಶಿಕಲಾ ಕ್ಯಾಂಪ್ ಮತ್ತೊಬ್ಬ ನಾಯಕನನ್ನು ಆರಿಸಿ ಆತನನ್ನು ತಮ್ಮ ಪ್ರತಿನಿಧಿಯಾಗಿ ನೇಮಿಸಿದರೇ, ಆ ವ್ಯಕ್ತಿಗೆ ಶಾಸಕರು ತಮ್ಮ ಬೆಂಬಲ ಸೂಚಿಸಬಹುದು, ಈ ವೇಳೆ ಎರಡು ಕ್ಯಾಂಪ್ ನವರು ಬಹುಮತ ಸಾಬೀತು ಪಡಿಸಿ ಎಂದು ರಾಜ್ಯಪಾಲರು ಆದೇಶಿಸುವ ಸಾಧ್ಯತೆ ಇರುತ್ತದೆ.

ಇಂಥಹುದ್ದೇ ಪರಿಸ್ಥಿತಿ 1984 ರಲ್ಲಿ ನಿರ್ಮಾಣವಾಗಿತ್ತು. ಎನ್ ಟಿ ರಾಮ್ ರಾವ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತು ಹಾಕಿ ಆ ಸ್ಥಾನಕ್ಕೆ ನಾದೆಂಡ್ಲಾ ಭಾಸ್ಕರ್ ರಾವ್ ಆಯ್ಕೆಯಾದರು. ನಂತರ ಭಾಸ್ಕರ್ ರಾವ್ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು. ವಾಪಸ್ ಬಂದ ಮೇಲೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದರು.

ಶಾಸನಸಭೆಯ ನಿಯಮದಂತೆ ರಾಜಿನಾಮೆ ಪತ್ರವನ್ನು ಸ್ವತಃ ಕೈಯ್ಯಲ್ಲಿ ಬರೆದು, ವಯಕ್ತಿಕವಾಗಿ ಅದನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು, ಆದರೆ ಪನ್ನೀರ್ ಸೆಲ್ವಂ ತಮ್ಮ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ನಲ್ಲಿ ಕಳುಹಿಸಿದ್ದಾರೆ, ಇದು ಕೂಡ ಪನ್ನೀರ್ ಸೆಲ್ವಂಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಪರಿಸ್ಥಿತಿ ಏನೇ ಇದ್ದರೂ ರಾಜ್ಯಪಾಲರು ಬಹುಮತ ಸಾಬೀಕತು ಪಡಿಸುವಂತೆ ಪನ್ನೀರ್ ಸೆಲ್ವಂ ಗೆ ಸೂಚಿಸಬಹುದು. ಎರಡು ಕ್ಯಾಂಪ್ ನವರು ತಮಗೆ ಜಯಲಲಿತಾ ಬೆಂಬಲ ಇತ್ತು, ಈಗ ಪಕ್ಷದ ಸಪೋರ್ಟ್ ಇದೆ  ಎಂದು ಹೇಳಿದರೂ ಸತ್ಯವನ್ನಷ್ಟೇ ರಾಜ್ಯಪಾಲರು ಬಯಸುವುದು, ಬಹುಮತಾ ಸಾಬೀತು ಪಡಿಸಿದರಷ್ಟೇ ಮಾತ್ರ ಸೆಲ್ವಂ ಮುಖ್ಯಮಂತ್ರಿಯಾಗಲು ಮುಂದುವರಿಯಲು ಸಾಧ್ಯ ಎಂದು ಹಿರಿಯ ವಕೀಲ ಎನ್ ಜಿಆರ್ ಪ್ರಸಾದ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com