ಹಿಂದೆಯೂ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ, ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ: ಶಶಿಕಲಾ

ಅಧರ್ಮ ಮೇಲುಗೈ ಸಾಧಿಸಬಹುದು ಆದರೆ ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ ಎಂದು ವಿಕೆ ಶಶಿಕಲಾ ಮಂಗಳವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಅಸತ್ಯ ಮೇಲುಗೈ ಸಾಧಿಸಬಹುದು ಆದರೆ ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ ಎಂದು ವಿಕೆ ಶಶಿಕಲಾ ಮಂಗಳವಾರ ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಚ್ ತೀರ್ಪು ಹೊರ ಬೀಳುತ್ತಿದ್ದಂತೆಯೇ ಇತ್ತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಕೆ ಶಶಿಕಲಾ ಅವರು, ನಾನು ಈ ಹಿಂದೆಯೂ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ.  ಅಸತ್ಯ ಮೇಲುಗೈ ಸಾಧಿಸಬಹುದು. ಆದರೆ ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ. ಅಮ್ಮಾ ಸಂಕಷ್ಟದಲ್ಲಿದ್ದಾಗ ನಾನೂ ಕಷ್ಟ ಅನುಭವಿಸಿದ್ದೇನೆ. ಈ ಬಾರಿ ಕೂಡ ಅದೇ ಮುಂದುವರೆದಿದೆ ಎಂದು ಹೇಳಿದ್ದಾರೆ.

ಜಯಲಲಿತಾ ಮೇಲಿನ ಹೊರೆಯನ್ನು ಶಶಿಕಲಾ ಹೊತ್ತಿದ್ದರು, ಈಗಲೂ ಅದು ಮುಂದವರೆದಿದೆ: ಎಐಎಡಿಎಂಕೆ ಟ್ವೀಟ್

ಅತ್ತ ಸುಪ್ರೀಂ ಕೋರ್ಟ್ ನಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ಹೊರ ಬೀಳುತ್ತಿದ್ದಂತೆಯೇ ಈ ಬಗ್ಗೆ ಟ್ವೀಟ್ ಮಾಡಿರುವ ಶಶಿಕಲಾ ಬಣದ ಎಐಎಡಿಎಂಕೆ, ಶಶಿಕಲಾ ಅವರು ಸದಾಕಾಲ ಜಯಲಲಿತಾ ಅವರ ಮೇಲಿನ  ಹೊರೆಯನ್ನು ತಾವು ಹೊತ್ತಿದ್ದರು. ಈಗಲೂ ಅದು ಮುಂದುವರೆದಿದೆ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com