ನನ್ನ ಪತಿಯನ್ನು ಭೇಟಿ ಮಾಡಿದೆ: ನ್ಯಾಯಾಲಯಕ್ಕೆ ಯೋಧ ತೇಜ್ ಬಹದ್ದೂರ್ ಪತ್ನಿ ಹೇಳಿಕೆ

ನನ್ನ ಪತಿಯನ್ನು ನಾನು ಭೇಟಿ ಮಾಡಿದೆ. ಅವರು ಸುರಕ್ಷಿತರಾಗಿದ್ದಾರೆಂದು ಖಚಿತವಾಗಿದೆ ಎಂದು ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಅವರ ಪತ್ನಿ ದೆಹಲಿ ನ್ಯಾಯಾಲಯಕ್ಕೆ ಬುಧವಾರ ಹೇಳಿಕೆ...
ಬಿಎಸ್ಎಫ್ ಯೋಧ ತೇಜ್ ಬಹದ್ದೂರ್
ಬಿಎಸ್ಎಫ್ ಯೋಧ ತೇಜ್ ಬಹದ್ದೂರ್

ನವದೆಹಲಿ: ನನ್ನ ಪತಿಯನ್ನು ನಾನು ಭೇಟಿ ಮಾಡಿದೆ. ಅವರು ಸುರಕ್ಷಿತರಾಗಿದ್ದಾರೆಂದು ಖಚಿತವಾಗಿದೆ ಎಂದು ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಅವರ ಪತ್ನಿ ದೆಹಲಿ ನ್ಯಾಯಾಲಯಕ್ಕೆ ಬುಧವಾರ ಹೇಳಿಕೆ ನೀಡಿದ್ದಾರೆ.

ದೇಶದ ಗಡಿ ಕಾಯುವ ಯೋಧರಿಗೆ ಹಿರಿಯ ಅಧಿಕಾರಿಗಳು ಕಳಪೆ ಗುಣಮಟ್ಟದ ಆಹಾರವನ್ನು ಪೂರೈಸುತ್ತಿದ್ದಾರೆಂದು ತೇಜ್ ಬಹದ್ದೂರ್ ಯಾಧವ್ ಗಂಭೀರ ಆರೋಪವನ್ನು ಮಾಡಿದ್ದರು. ಯೋಧರಿಗೆ ನೀಡುವ ಆಹಾರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ್ದರು. ಈ ಪ್ರಕರಣ ಸಾಕಷ್ಟು ವಿರೋಧಗಳಿಗೆ ಕಾರಣವಾಗಿತ್ತು.

ಇದಾದ ಬಳಿಕ ತೇಜ್ ಬಹದ್ದೂರ್ ಅವರ ಪತ್ನಿ ಸೇನೆ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರು. ಪ್ರಕರಣ ಬೆಳಕಿಗೆ ಬಂದ ಬಳಿಕ ನನ್ನ ಪತಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಅಲ್ಲದೆ, ಪತಿಯನ್ನು ಹುಡುಕಿ ಕೊಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಫೆ.10 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪತಿಯನ್ನು ಭೇಟಿ ಮಾಡಲು ಹಾಗೂ ಹಾಗೂ 2 ದಿನಗಳ ಕಾಲ ಪತಿಯೊಂದಿಗೆ ಕಾಲ ಕಳೆಯಲು ಶರ್ಮಿಳಾ ದೇವಿಗೆ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.

ಪ್ರಕರಣ ಸಂಬಂಧ ಇಂದು ನಡೆದ ವಿಚಾರಣೆ ವೇಳೆ ಗಡಿ ಭದ್ರತಾ ಪಡೆಯ ಪರ ವಕೀಲ ಗೌರಂಗ್ ಕಾಂತ್ ಅವರು ವಾದ ಮಂಡಿಸಿದ್ದರು. ತೇಜ್ ಬಹದ್ದೂರ್ ಅವರು ನಾಪತ್ತೆಯಾಗಿಲ್ಲ. ಅವರನ್ನು ಬೇರೆಡೆಗೆ ಕರ್ತವ್ಯ ನಿರ್ವಹಿಸಲು ವರ್ಗಾವಣೆ ಮಾಡಲಾಗಿತ್ತು. ಯಾದವ್ ಅವರು ಹೊಸ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದು, ಅವರ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಲಾಗಿಲ್ಲ. ಆದರೆ, ತನಿಖೆ ಹಿನ್ನಲೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದ ವೈಯಕ್ತಿಕ ಫೋನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಹೇಳಿದರು.

ನಂತರ ಹೇಳಿಕೆ ನೀಡಿರುವ ಶರ್ಮಿಳಾ ದೇವಿ ಅವರು ನಾನು ನನ್ನ ಪತಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಅವರು ಸುರಕ್ಷಿತರಾಗಿರುವ ನಂಬಿಕೆ ಬಂದಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com