ರಹಸ್ಯ ಮತದಾನದ ಮೂಲಕ ತಮಿಳುನಾಡು ನೂತನ ಸಿಎಂ ಆಯ್ಕೆ!

ಸಿಎಂ ಗಾದಿಯ ಪ್ರಮುಖ ಆಕಾಂಕ್ಷಿ ವಿಕೆ ಶಶಿಕಲಾ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರುವ ಮೂಲಕ ಎಐಎಡಿಎಂಕೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಸಿಎಂ ಗಾದಿಯ ಪ್ರಮುಖ ಆಕಾಂಕ್ಷಿ ವಿಕೆ ಶಶಿಕಲಾ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರುವ ಮೂಲಕ ಎಐಎಡಿಎಂಕೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ರಾಜ್ಯಪಾಲ ವಿದ್ಯಾಸಾಗರ  ರಾವ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಏತನ್ಮಧ್ಯೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಈ ಹಿಂದೆ ವಾರದೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡುವಂತೆ ರಾಜ್ಯಪಾಲ ವಿದ್ಯಾ ಸಾಗರ ರಾವ್ ಅವರಿಗೆ ಸೂಚನೆ ಸಲಹೆ ನೀಡಿದ್ದರು. ಅದರಂತ  ಬಹುಮತ ಸಾಬೀತಿಗೆ ವೇದಿಕೆ ಕಲ್ಪಿಸಲು ರಾಜ್ಯಪಾಲರು ಚಿಂತನೆ ನಡೆಸುತ್ತಿದ್ದು, ಇದಲ್ಲದೆ ವಿಶೇಷ ವಿಧಾನಸಭೆ ಕಲಾಪ ಕರೆದು ಅಲ್ಲಿ ರಹಸ್ಯ ಮತದಾನ ನಡೆಸುವ ಮೂಲಕ ನೂತನ ಸಿಎಂ ಆಯ್ಕೆಗೂ ಚಿಂತನೆ ನಡೆಸಿದ್ದಾರೆ  ಎಂದು ಹೇಳಲಾಗುತ್ತಿದೆ.

ಹಂಗಾಮಿ ಸಿಎಂ ಓ ಪನ್ನೀರ್ ಸೆಲ್ವಂ ಅವರು ತಮಗೇ ಬಹುಮತಿವಿದೆ ಎಂದು ವಾದಿಸುತ್ತಿದ್ದು, ಇತ್ತ ಶಶಿಕಲಾ ಬಣದ ನೂತನ ಶಾಸಕಾಂಗ ಪಕ್ಷದ ನಾಯಕ ಎಡಪಾಡಿ ಪಳನಿ ಸ್ವಾಮಿ ಅವರೂ ಕೂಡ ತಮಗೆ ಬಹುತೇಕ ಶಾಸಕರ  ಬೆಂಬಲವಿದ್ದು, ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು, ರಹಸ್ಯ ಮತದಾನದ ಮೂಲಕ ಶಾಸಕರು ತಮ್ಮ ಸಿಎಂ ಆಯ್ಕೆ ಮಾಡಲು  ಅನುವು ಮಾಡಿಕೊಡುವ ಸಾಧ್ಯತೆ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.

1998ರ ದಶಕದಲ್ಲಿ ಉತ್ತರ ಪ್ರದೇಶದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಗದಾಂಬಿಕಾ ಪಾಲ್ ಮತ್ತು ಕಲ್ಯಾಣ್ ಸಿಂಗ್ ಅವರ ನಡುವೆ ಬಿಕ್ಕಟ್ಟು ಏರ್ಪಟ್ಟಾಗ ಬಹುಮತ ಸಾಬೀತು ಪಡಿಸುವಂತೆ ಸೂಚಿಸಲಾಗಿತ್ತು.  ಅದರಂತೆ ಆಗ ರಾಜ್ಯಪಾಲರು ರಹಸ್ಯ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದರು. 2005ರಲ್ಲೂ ಜಾರ್ಖಂಡ್ ನಲ್ಲಿ ಶಿಬು ಸೊರೇನ್ ಮತ್ತು ಅರ್ಜುನ್ ಮುಂಡಾ ನಡುವೆ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ರಹಸ್ಯ ಮತದಾನ ನಡೆಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com