ಇಂದು ಬೆಳಗ್ಗೆ ಎಸ್ ಟಿಎಫ್ ಹಾಗೂ ಪೊಲೀಸರು ಜಂಟಿಯಾಗಿ ಮರ್ದ್ ಪಾಲ್ ಸಮೀಪ ನಕ್ಸಲರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ನಕ್ಸಲರ ಗುಂಪೊಂದು ಪೊಲೀಸರ ಹಾಗೂ ಎಸ್ ಟಿಎಫ್ ಪಡೆ ಮೇಲೆ ಭಾರಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎಸ್ ಟಿಎಫ್ ನ ಸಹಾಯಕ ಕಮಾಂಡರ್ ಹಾಗೂ ಪೇದೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅವಸ್ಥಿ ಹೇಳಿದ್ದಾರೆ.