ಸಿಪಿಇಸಿ ಯೋಜನೆ ನಾಶಕ್ಕೆ ಭಾರತದ ಸಂಚು ರೂಪಿಸುತ್ತಿದೆ: ಪಾಕಿಸ್ತಾನ

ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಭಾರತ ಸಿಪಿಇಸಿ ಯೋಜನೆಯನ್ನು ನಾಶಗೊಳಿಸಲು ಯೋಜನೆ ರೂಪಿಸುತ್ತಿದೆ
ಸಿಪಿಇಸಿ ಯೋಜನೆ ನಾಶಕ್ಕೆ ಭಾರತದ ಸಂಚು ರೂಪಿಸುತ್ತಿದೆ: ಪಾಕಿಸ್ತಾನ
ಸಿಪಿಇಸಿ ಯೋಜನೆ ನಾಶಕ್ಕೆ ಭಾರತದ ಸಂಚು ರೂಪಿಸುತ್ತಿದೆ: ಪಾಕಿಸ್ತಾನ
ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಭಾರತ ಸಿಪಿಇಸಿ ಯೋಜನೆಯನ್ನು ನಾಶಗೊಳಿಸಲು ಯೋಜನೆ ರೂಪಿಸುತ್ತಿದೆ ಎಂದಿದೆ. 
ಸಿಪಿಇಸಿ ಯೋಜನೆ ನಾಶಕ್ಕೆ ಭಾರತ ರೂಪಿಸುತ್ತಿರುವ ಯೋಜನೆಗಳ ಬಗ್ಗೆ ನಮಗೆ ಅರಿವಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಜ್ ಜಕಾರಿಯಾ ಹೇಳಿದ್ದಾರೆ. ಭಾರತದ ಅಣ್ವಸ್ತ್ರಗಳು ದಕ್ಷಿಣ ಏಷ್ಯಾಗೆ ಅಪಾಯಕಾರಿ ಎಂದೂ ನಫೀಜ್ ಜಕಾರಿಯಾ ಎಚ್ಚರಿಸಿದ್ದು, ಭಾರತ ಭಾರಿ ಪ್ರಮಾಣದಲ್ಲಿ ಅಣ್ವಸ್ತ್ರಗಳನ್ನು ಖರೀದಿಸುತ್ತಿರುವುದು ಪ್ರಾದೇಶಿಕ ಅಸ್ಥಿರತೆ ಮೂಡಿಸಬಹುದು ಎಂದು ಹೇಳಿದ್ದಾರೆ. 
ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಿಂದ ಪಾಕಿಸ್ತಾನದೊಂದಿಗೆ ಇಡೀ ದಕ್ಷಿಣ ಏಷ್ಯಾ ಪ್ರದೇಶಕ್ಕೆ ಲಾಭವಾಗಲಿದೆ ಎಂದು ನಫೀಜ್ ಜಕಾರಿಯಾ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com