ಲಿಂಗ ಪತ್ತೆ ಕುರಿತು ಜಾಹೀರಾತು: ಗೂಗಲ್, ಯಾಹೂಗೆ ಸುಪ್ರೀಂ ತರಾಟೆ

ಭಾರತದಲ್ಲಿ ನಿಷೇಧಿತ ಭ್ರೂಣಲಿಂಗ ಪತ್ತೆ ಕುರಿತಂತೆ ಜಾಹೀರಾತು ನೀಡಿ ಕಾನೂನು ಉಲ್ಲಂಘಿಸುತ್ತಿರುವ ಸರ್ಚ್ ಇಂಜಿನ್ ಗಳಾದ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ನವದೆಹಲಿ: ಭಾರತದಲ್ಲಿ ನಿಷೇಧಿತ ಭ್ರೂಣಲಿಂಗ ಪತ್ತೆ ಕುರಿತಂತೆ ಜಾಹೀರಾತು ನೀಡಿ ಕಾನೂನು ಉಲ್ಲಂಘಿಸುತ್ತಿರುವ ಸರ್ಚ್ ಇಂಜಿನ್ ಗಳಾದ ಗೂಗಲ್, ಯಾಹೂ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳನ್ನು ಗುರುವಾರ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಭ್ರೂಣ ಲಿಂಗ ಪತ್ತೆ ಕುರಿತಂತೆ ಸರ್ಚ್ ಇಂಜಿನ್ ಗಳಾದ ಗೂಗಲ್, ಯಾಹೂ ಹಾಗೂ ಇನ್ನಿತರೆ ಕಂಪನಿಗಳು ಜಾಹೀರಾತುಗಳನ್ನು ನೀಡುತ್ತಿದ್ದು, ಈ ಕೂಡಲೇ ಇದನ್ನು ನಿಷೇಧಿಸಬೇಕು ಎಂದು ಸುಬು ಮ್ಯಾಥ್ಯೂ ಜಾರ್ಜ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ತಜ್ಞರ ಸಮಿತಿ ರಚಿಸಿ ಕೂಡಲೇ ಕೀ ವರ್ಡ್ ಗಳನ್ನು ಬ್ಲಾಕ್ ಮಾಡುವಂತೆ ಕಂಪನಿಗಳಿಗೆ ಸೂಚಿಸಿದೆ.
ಇದೇ ವೇಳೆ ಟಿವಿ, ರೆಡಿಯೋ ಹಾಗೂ ದಿನ ಪತ್ರಿಕೆಗಳಿಗೆ ಜಾಹೀರಾತು ನೀಡುವ ನೋಡಲ್ ಸಂಸ್ಥೆಯೊಂದನ್ನು ಸ್ಥಾಪಿಸಿ, ಆ ಮೂಲಕ ಲಿಂಗ ಪತ್ತೆ ಕುರಿತು ಯಾರಾದರೂ ಜಾಹೀರಾತು ನೀಡಿದರೆ ಆ ಬಗ್ಗೆ ಒಂದು ವಾರದಲ್ಲಿ ತಮ್ಮ ಗಮನಕ್ಕೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಲಿಂಗ ಪತ್ತೆ ಕುರಿತ ಮಾಹಿತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಗೂಗಲ್ ಸಲ್ಲಿಸಿದ್ದ ಅಫಿಡವಿಟ್ ಗೆ ಕೋರ್ಟ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿಂದಿನ ವಿಚಾರಣೆಯಲ್ಲೂ ಸರ್ಚ್ ಇಂಜಿನ್ ಗಳ ವಿರುದ್ಧ ಕಿಡಿ ಕಾರಿದ್ದ ಕೋರ್ಟ್, ಇಂತಹುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸರ್ಕಾರ ಏನನ್ನೂ ಮಾಡಲು ಸಾಧ್ಯವಿಲ್ಲವೇ? ಮಧ್ಯವರ್ತಿ ಹೆಸರಿನಲ್ಲಿ ಗೂಗಲ್, ಮೈಕ್ರೋಸಾಫ್ಟ್ ಹಾಗೂ ಯಾಹೂ ಕಂಪನಿಗಳು ಅಕ್ರಮ ಚಟುವಟಿಕೆ ನಡೆಸುವುದು ಸರಿಯಲ್ಲ. ಇಂತಹ ಬೆಳವಣಿಗೆಗಳನ್ನು ಮುಂದುವರೆಯಲು ಬಿಡಬಾರದು ಎಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com