ಜಮ್ಮು-ಕಾಶ್ಮೀರ: ಬ್ಯಾಂಕ್'ನಿಂದ ರೂ.2 ಲಕ್ಷ ದರೋಡೆ ಮಾಡಿದ ಉಗ್ರರು

ಜಮ್ಮು ಮತ್ತು ಕಾಶ್ಮೀರದ ಸೋಫಿಯನ್ ಜಿಲ್ಲೆಯ ಬ್ಯಾಂಕ್ ವೊಂದರಲ್ಲಿ ಉಗ್ರರು ದರೋಡೆ ಮಾಡಿದ್ದು, ರೂ. 2 ಲಕ್ಷಕ್ಕೂ ಅಧಿಕ ಹಣವನ್ನು ಹೊತ್ತೊಯ್ದಿರುವ ಘಟನೆ ಗುರುವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸೋಫಿಯನ್: ಜಮ್ಮು ಮತ್ತು ಕಾಶ್ಮೀರದ ಸೋಫಿಯನ್ ಜಿಲ್ಲೆಯ ಬ್ಯಾಂಕ್ ವೊಂದರಲ್ಲಿ ಉಗ್ರರು ದರೋಡೆ ಮಾಡಿದ್ದು, ರೂ. 2 ಲಕ್ಷಕ್ಕೂ ಅಧಿಕ ಹಣವನ್ನು ಹೊತ್ತೊಯ್ದಿರುವ ಘಟನೆ ಗುರುವಾರ ನಡೆದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ರೂ.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ಉಗ್ರ ಚಟುವಟಿಕೆಗಳಿಗೆ ಆರ್ಥಿಕ ಕೊರತೆ ಎದುರಾಗಿದ್ದು, ಉಗ್ರರು ಇದೀಗ ಹಣಕ್ಕಾಗಿ ಬ್ಯಾಂಕುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ನೋಟು ನಿಷೇಧದ ಬಳಿಕ ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್ ಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗತೊಡಗಿವೆ.

ಡಿಸೆಂಬರ್ 8ರಂದೂ ಕೂಡ ಇಂತಹದ್ದೇ ಮತ್ತೊಂದು ಘಟನೆ ನಡೆದಿತ್ತು. ಪುಲ್ವಾಮಾದ ಬ್ಯಾಂಕ್ ವೊಂದಕ್ಕೆ ನುಗ್ಗಿದ್ದ ಉಗ್ರರು ರೂ. 13.68 ಲಕ್ಷ ಹಣವನ್ನು ದರೋಡೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com