ಎಐಎಡಿಎಂಕೆ ಶಶಿಕಲಾ ಕುಟುಂಬ ತೆಕ್ಕೆಗೆ ಹೋಗಲು ಬಿಡುವುದಿಲ್ಲ: ಪನ್ನೀರ್'ಸೆಲ್ವಂ

ಎಐಎಡಿಎಂಕೆ ಶಶಿಕಲಾ ಕುಟುಂಬ ತೆಕ್ಕೆಗೆ ಹೋಗಲು ಯಾವುದೇ ಕಾರಣಕ್ಕೂ ನಮ್ಮ ಬಣ ಬಿಡುವುದಿಲ್ಲ ಎಂದು ತಮಿಳುನಾಡು ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಗುರುವಾರ ಹೇಳಿದ್ದಾರೆ...
ತಮಿಳುನಾಡು ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ
ತಮಿಳುನಾಡು ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ

ಚೆನ್ನೈ; ಎಐಎಡಿಎಂಕೆ ಶಶಿಕಲಾ ಕುಟುಂಬ ತೆಕ್ಕೆಗೆ ಹೋಗಲು ಯಾವುದೇ ಕಾರಣಕ್ಕೂ ನಮ್ಮ ಬಣ ಬಿಡುವುದಿಲ್ಲ ಎಂದು ತಮಿಳುನಾಡು ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಗುರುವಾರ ಹೇಳಿದ್ದಾರೆ.

ವಿ.ಕೆ.ಶಶಿಕಲಾ ಅವರ ನಿಷ್ಠಾವಂತ ಎಡಪ್ಪಾಡಿ ಪಳನಿಸ್ವಾಮಿಯವರನ್ನು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರು ನೇಮಕ ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಎಐಎಡಿಎಂಕೆ ಪಕ್ಷ ಶಶಿಕಲಾ ಕುಟುಂಬಸ್ಥರ ಕೈಗೆ ಹೋಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಎಂದು ತಿಳಿಸಿದ್ದಾರೆ.

ಪಳನಿಸ್ವಾಮಿಯವರು ಕಳೆದ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಬೆಂಬಲಕ್ಕಿರುವ ಶಾಸಕರ ಪಟ್ಟಿಯನ್ನು ನೀಡಿದ್ದರು. ನಿನ್ನೆ ನಡೆದ ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ನಾಯಕನನ್ನಾಗಿ ಪಳನಿಸ್ವಾಮಿಯವರನ್ನು ಆಯ್ಕೆ ಮಾಡಲಾಗಿತ್ತು. ಇದರ ಆಧಾರದ ಮೇಲೆ ಇ.ಕೆ.ಪಳನಿಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದ ರಾಜ್ಯಪಾಲರು, ವಿಧಾನಸಭೆಯಲ್ಲಿ 15 ದಿನಗಳೊಳಗೆ ವಿಶ್ವಾಸ ಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ.

ರಾಜ್ಯಪಾಲರ ಈ ನಡೆ ಇದೀಗ ಪನ್ನೀರ್ ಸೆಲ್ವಂ ಅವರಿಗೆ ಹಿನ್ನಡೆಯನ್ನುಂಟುಮಾಡಿದೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಈ ಎಲ್ಲಾ ರಾಜಕೀಯ ಬೆಳವಣಿಗೆ ಹಿನ್ನಲೆಯಲ್ಲಿ ಎಐಎಡಿಎಕೆ ಸಂಸದ ವಿ.ಮೈತ್ರೇಯನ್ ಸೇರಿ ಪನ್ನೀರ್ ಸೆಲ್ವಂ ಅವರ ಬಣದ ಇನ್ನಿತರೆ ನಾಯಕರು ಇಂದು ದೆಹಲಿ ಚುನಾವಣಾ ಆಯೋಗದ ಮೆಟ್ಟಿಲೇರಲಿದ್ದು, ಚುನಾವಣಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಮೂಲಗಳಿ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com