ನನಗಾದ ಹಿಂಸೆಯ ಬಗ್ಗೆ ಯಾರಿಗೆ ದೂರು ನೀಡಲಿ?: ಡಿಎಂಕೆ ಸದಸ್ಯರಿಂದ ಹಲ್ಲೆಗೊಳಗಾದ ಸ್ಪೀಕರ್

ಡಿಎಂಕೆ ಶಾಸಕರು ಸ್ಪೀಕರ್ ಮೇಲೆ ಹಲ್ಲೆ ನಡೆಸಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲ
ತಮಿಳುನಾಡು ವಿಧಾನಸಭೆಯಲ್ಲಿ ಕೋಲಾಹಲ
ಚೆನ್ನೈ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಎಡಪ್ಪಾಡಿ ಪಳನಿ ಸ್ವಾಮಿ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಕೋಲಾಹಲ ಉಂಟಾಗಿದ್ದು, ಡಿಎಂಕೆ ಶಾಸಕರು ಹಲ್ಲೆ ನಡೆಸಿದ್ದಾರೆ. 
ಹಲ್ಲೆ ನಡೆಸಿರುವುದಷ್ಟೇ ಅಲ್ಲದೇ, ಡಿಎಂಕೆ ಶಾಸಕರು ವಿಧಾನಸಭೆಯ ಸ್ಪೀಕರ್ ಆಸನದಲ್ಲಿ ಕುಳಿತು ಸಭ್ಯತೆಯ ರೇಖೆ ದಾಟಿ ವರ್ತಿಸಿದ್ದಾರೆ. ಶಾಸಕರ ವರ್ತನೆಯ ಬಗ್ಗೆ ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ. ಧನಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದು, ನನಗೆ ಉಂಟಾದ ಹಿಂಸೆಯ ಬಗ್ಗೆ ಯಾರಲ್ಲಿ ದೂರು ನೀಡಲಿ ಎಂದು ಪ್ರಶ್ನಿಸಿದ್ದಾರೆ. 
ರಹಸ್ಯ ಮತದಾನದ ಮೂಲಕ ವಿಶ್ವಾಸ ಮತ ಸಾಬೀತಿಗೆ ಅವಕಾಶ ನೀಡಬೇಕೆಂದು ಡಿಎಂಕೆ ಸದಸ್ಯರು ಆಗ್ರಹಿಸಿ ಡಿಎಂಕೆ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೆಲ ಶಾಸಕರು ಸಭ್ಯತೆಯನ್ನು ಮೀರಿ ವರ್ತಿಸಿದ್ದು, ನನಗಾದ ಹಿಂಸೆಯ ಬಗ್ಗೆ ಯಾರಲ್ಲಿ ದೂರು ನೀಡಲಿ? ಎಂದು ಡಿಎಂಕೆ ಸದಸ್ಯರಿಂದ ಹಲ್ಲೆಗೂಳಗಾದ ಸ್ಪೀಕರ್ ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com