ವಿಶ್ವಾಸ ಮತ ಗದ್ದಲ ಪ್ರಕರಣ: ವರದಿ ಕೇಳಿದ ರಾಜ್ಯಪಾಲ ವಿದ್ಯಾಸಾಗರ್ ರಾವ್

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರದ ವಿಶ್ವಾಸ ಮತಯಾಚನೆಯ ವಿಶೇಷ ಅಧಿವೇಶನದ ವೇಳೆ ನಡೆಸಿದ್ದ ತೀವ್ರ ಗದ್ದಲ ಪ್ರಕರಣ ಕುರಿತಂತೆ 'ವಾಸ್ತವಾಂಶ ವರದಿ' ಸಲ್ಲಿಸುವಂತೆ ತಮಿಳುನಾಡು ವಿಧಾನಸಭೆ ಕಾರ್ಯದರ್ಶಿಗೆ ರಾಜ್ಯಪಾಲ...
ರಾಜ್ಯಪಾಲ ವಿದ್ಯಾಸಾಗರ್ ರಾವ್
ರಾಜ್ಯಪಾಲ ವಿದ್ಯಾಸಾಗರ್ ರಾವ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರದ ವಿಶ್ವಾಸ ಮತಯಾಚನೆಯ ವಿಶೇಷ ಅಧಿವೇಶನದ ವೇಳೆ ನಡೆಸಿದ್ದ ತೀವ್ರ ಗದ್ದಲ ಪ್ರಕರಣ ಕುರಿತಂತೆ 'ವಾಸ್ತವಾಂಶ ವರದಿ' ಸಲ್ಲಿಸುವಂತೆ ತಮಿಳುನಾಡು ವಿಧಾನಸಭೆ ಕಾರ್ಯದರ್ಶಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಸೋಮವಾರ ನಿರ್ದೇಶನ ನೀಡಿದ್ದಾರೆ.

ವಿಶ್ವಾಸ ಮತಯಾಚನೆ ಪ್ರಕರಣಗಳ ಸಂಬಂಧ ನಿನ್ನೆಯಷ್ಟೇ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಸೇರಿದಂತೆ ಮೂರು ಬಣಗಳ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಾತುಕತೆ ಬಳಿಕ ರಾಜ್ಯಪಾಲರು ವಿಧಾನಸಭೆ ಕಾರ್ಯದರ್ಶಿ ಎ.ಎಂ.ಪಿ. ಜಮಾಲುದ್ದೀನ್ ಅವರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ವರದಿಯಲ್ಲಿ ರಾಜ್ಯಪಾಲರು ಕೆಲ ಸೂಚನೆಗಳನ್ನು ನೀಡಿದ್ದು, ವರದಿಯಲ್ಲಿ ಎಲ್ಲಾ ರೀತಿಯ ದಾಖಲೆಗಳು ಹಾಗೂ ವಿಡಿಯೋ ಸಾಕ್ಷಿಗಳಿರಬೇಕೆಂದು ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com