ತಮಿಳುನಾಡು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ!

ತಮಿಳುನಾಡು ರಾಜ್ಯ ರಾಜಕೀಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾಗಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ತಮಿಳುನಾಡು ರಾಜ್ಯ ರಾಜಕೀಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾಗಲಾಗಿದೆ.

ತಮಿಳುನಾಡು ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ವಿಶ್ವಾಸ ಮತ ಯಾಚನೆ ವೇಳೆ ನಡೆದ ಶಂಕಾಸ್ಪದ ಕಾರ್ಯಕಲಾಪಕ್ಕೆ ಸಂಬಂಧಿಸಿದಂತೆ ಡಿಎಂಕೆ ಪಕ್ಷದ ಶಾಸಕರು ಸ್ಪೀಕರ್ ಧನಪಾಲ್ ವಿರುದ್ಧ ಅವಿಶ್ವಾಸ ನಿರ್ಣಯ  ಮಂಡನೆ ಮಾಡಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ ಡಿಎಂಕೆ ಪಕ್ಷದ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು, ಅಸೆಂಬ್ಲಿ ಕಾರ್ಯದರ್ಶಿ ಎಎಂಪಿ ಜಮಾಲುದ್ದೀನ್ ಅವರಿಗೆ ಅಧಿಕೃತ ನೋಟಿಸ್ ನೀಡಿದ್ದು, ಅದರ ಒಂದು ಪ್ರತಿಯನ್ನು  ಸ್ಪೀಕರ್ ಧನಪಾಲ್ ಅವರಿಗೂ ರವಾನಿಸಿದ್ದಾರೆ.

ತಮ್ಮ ಪಕ್ಷದ ಸುಮಾರು 34 ಶಾಸಕರು ಸಹಿ ಹಾಕಿರುವ ನೋಟಿಸ್ ಅನ್ನು ಸ್ಪೀಕರ್ ಧನಪಾಲ್ ಮತ್ತು ಅಸೆಂಬ್ಲಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ತಮ್ಮ ನೋಟಿಸ್ ಗೆ ಇನ್ನು 15 ದಿನಗಳೊಳಗೆ  ಉತ್ತರ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಅವಿಶ್ವಾಸ ನಿರ್ಣಯ ಪಾಸ್ ಆದರೆ ಮುಂದಿನ ಗತಿ?
ಇನ್ನು ಡಿಎಂಕೆ ಶಾಸಕರು ಮಂಡಿಸಿರುವ ಅವಿಶ್ವಾಸ ನಿರ್ಣಯದ ಪರವಾಗಿ ನಿರ್ಣಯ ಕೈಗೊಂಡಿದ್ದೇ ಆದರೇ ಆಗ ಸ್ಪೀಕರ್ ಧನಪಾಲ್ ತಮ್ಮ ಸ್ಥಾನವನ್ನು ಕಳೆದು ಕೊಳ್ಳಲಿದ್ದು, ಉಪ ಸಭಾಪತಿಗಳ ನೇತೃತ್ವದಲ್ಲಿ ಕಲಾಪ  ನಡೆಯಲಿದೆ.

ಒಟ್ಟಾರೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಬಳಿಕ ತಮಿಳುನಾಡು ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಸ್ಪೀಕರ್ ಧನಪಾಲ್ ಅವರ ಸ್ಥಾನಕ್ಕೂ ಕುತ್ತು ಬಂದಿದೆ. ಕೇವಲ ಸ್ಪೀಕರ್  ಮಾತ್ರವಲ್ಲದೇ ಇತ್ತೀಚೆಗೆ ವಿವಾದಾಸ್ಪದವಾಗಿ ವಿಶ್ವಾಸ ಮತ ಗೆದ್ದಿದ್ದ ಎಡಪ್ಪಾಡಿ ಪಳನಿ ಸ್ವಾಮಿ ಸರ್ಕಾರಕ್ಕೂ ತಲೆನೋವು ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com