'ಕಸಬ್' ಹೇಳಿಕೆ: ಅಮಿತ್ ಶಾ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳನ್ನು ಉಗ್ರ ಅಜ್ಮಲ್ ಕಸಬ್ ಹೋಲಿಕೆ ಮಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಕಾಂಗ್ರೆಸ್ ಗುರುವಾರ ವಾಗ್ದಾಳಿ ನಡೆಸಿದೆ...
ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೇವಾಲಾ
ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೇವಾಲಾ

ನವದೆಹಲಿ: ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳನ್ನು ಉಗ್ರ ಅಜ್ಮಲ್ ಕಸಬ್ ಹೋಲಿಕೆ ಮಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಕಾಂಗ್ರೆಸ್ ಗುರುವಾರ ವಾಗ್ದಾಳಿ ನಡೆಸಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೇವಾಲಾ ಅವರು, ಇಂತಹ ಅವಹೇಳಕಾರಿ ಹಾಗೂ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಲು ವಿಫಲ ಹೊಂದಿರುವ ನಾಯಕರಿಂದ ಮಾತ್ರ ಸಾಧ್ಯ. ಕೆಟ್ಟ ಭಾಷೆ ಹಾಗೂ ನಕಲಿಯಾಗಿ ಮಾತನಾಡುವುದು ಅಮಿತ್ ಶಾ ಅವರಿಗೆ ಅಭ್ಯಾಸವಾಗಿ ಹೋಗಿದೆ ಎಂದು ಹೇಳಿದ್ದಾರೆ.

ನಿನ್ನಯಷ್ಟೇ ಉತ್ತರಪ್ರದೇಶದ ಗೋರಖ್ ಪುರದಲ್ಲಿ ಮಾತನಾಡಿದ್ದ ಅಮಿತ್ ಶಾ ಅವರು ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳನ್ನು ಮುಂಬೈ ಮೇಲೆ ದಾಳಿ ನಡೆಸಿ 160ಕ್ಕೂ ಹೆಚ್ಚು ಜನರನ್ನು ಬಲೆ ಪಡೆದಿದ್ದ ಉಗ್ರ ಅಜ್ಮಲ್ ಕಸಬ್ ಹೆಸರಿಗೆ ಹೋಲಿಕೆ ವಿವಾದ ಸೃಷ್ಟಿಸಿದ್ದರು.

ಈ ಕಸಬ್ ಗಳನ್ನು ಚಿರನಿದ್ರೆಗೆ ಜಾರಿಸುವವರೆಗೂ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಸಬ್ (ಕ-ಕಾಂಗ್ರೆಸ್, ಸ-ಸಮಾಜವಾದಿ ಮತ್ತು ಬ್-ಬಿಎಸ್ ಪಿ) ಗಳನ್ನು ಧೂಳಿಪಟ ಮಾಡಿ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com