ಎಂದಿಗೂ ರಾಜಕೀಯ ಪ್ರವೇಶಿಸುವುದಿಲ್ಲ: ನಿತೀಶ್ ಕುಮಾರ್ ಪುತ್ರ

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುವುದು ಇಂದಿನ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ವಿಷಯ. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಮಾತ್ರ ಇದಕ್ಕೆ ಅಪವಾದ.
ನಿತೀಶ್ ಕುಮಾರ್ ಪುತ್ರ ನಿಶಾಂತ್ (ಸಂಗ್ರಹ ಚಿತ್ರ)
ನಿತೀಶ್ ಕುಮಾರ್ ಪುತ್ರ ನಿಶಾಂತ್ (ಸಂಗ್ರಹ ಚಿತ್ರ)
Updated on
ಪಾಟ್ನಾ: ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುವುದು ಇಂದಿನ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ವಿಷಯ. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಮಾತ್ರ ಇದಕ್ಕೆ ಅಪವಾದ. 
"ರಾಜಕಾರಣ ಪ್ರವೇಶಿಸುವ ಬಗ್ಗೆ ಮಾತನಾಡಿರುವ ಬಗ್ಗೆ ನಿಶಾಂತ್ ಕುಮಾರ್, " ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ರಾಜಕೀಯಕ್ಕೆ ಸೇರುವುದಿಲ್ಲ ರಾಜಕೀಯ ಸೇರುವುದಕ್ಕಿಂತಲೂ ಆಧ್ಯಾತ್ಮ ಜೀವನ ನಡೆಸಲು ಇಷ್ಟಪಡುತ್ತೇನೆ ಎಂದು ನಿಶಾಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ರಾಜಕೀಯ ಪ್ರವೇಶಿಸುವುದರ ಬಗ್ಗೆ ತಮ್ಮ ನಿರ್ಧಾರವನ್ನು ನಿಶಾಂತ್ ತಮ್ಮ ತಂದೆಗೆ ತಿಳಿಸಿದ್ದಾರೆ. ಬಿಹಾರದ ಅಭಿವೃದ್ಧಿಗೆ ತಂದೆ ನಿತೀಶ್ ಕುಮಾರ್ ಶ್ರಮಿಸುತ್ತಿರುವುದರ ಬಗ್ಗೆ ಹೆಮ್ಮೆ ಇದೆ ಎಂದು ನಿಶಾಂತ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಅವರು ದೇಶದ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ ಎಂದೂ ಸಹ ನಿಶಾಂತ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com