ಸೌಹಾರ್ದತೆಯ ಸಂಕೇತ: 39 ಪಾಕಿಸ್ತಾನಿ ಖೈದಿಗಳನ್ನು ಬಿಡುಗಡೆ ಮಾಡಲಿರುವ ಭಾರತ

ಪಾಕಿಸ್ತಾನದ ಶಾಂತಿ ಪ್ರಸ್ತಾವನೆಗೆ ಪೂರಕವಾಗಿ ಸ್ಪಂದಿಸಿರುವ ಭಾರತ, ಪಾಕಿಸ್ತಾನದ 39 ಖೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್
ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್
ನವದೆಹಲಿ: ಪಾಕಿಸ್ತಾನದ ಶಾಂತಿ ಪ್ರಸ್ತಾವನೆಗೆ ಪೂರಕವಾಗಿ ಸ್ಪಂದಿಸಿರುವ ಭಾರತ, ಪಾಕಿಸ್ತಾನದ 39 ಖೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. 
ಶಿಕ್ಷೆಯನ್ನು ಪೂರ್ಣಗೊಳಿಸಿರುವ 21 ಖೈದಿಗಳು ಹಾಗೂ 18 ಮೀನುಗಾರರನ್ನು ಭಾರತ ಬಿಡುಗಡೆ ಮಾಡಲಿದ್ದು, ಬಾಬೂಲಾಲ್ ಚೌಹಾಣ್ ಎಂಬ ಭಾರತೀಯ ಯೋಧನನ್ನು ಪಾಕಿಸ್ತಾನ ಬಿಡುಗಡೆ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 
ಈ ಬಗ್ಗೆ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಪ್ರತಿಕ್ರಿಯೆ ನೀಡಿದ್ದು, ಭಾರತ ಖೈದಿಗಳನ್ನು ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವಿತ್ತು. ಈ ಪೈಕಿ 33 ಖೈದಿಗಳ ಶಿಕ್ಷೆಯ ಅವಧಿ ಮುಕ್ತಾಯಗೊಂಡಿದೆ, ಮಾ.1 ರಂದು ಖೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಬ್ದುಲ್ ಬಸಿತ್ ತಿಳಿಸಿದ್ದಾರೆ. 
ಇದೇ ವೇಳೆ ಜೆಯುಡಿ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ನ್ನು ಗೃಹ ಬಂಧನಲ್ಲಿರಿಸಿರುವುದರ ಬಗ್ಗೆ ಜಾಗರೂಕತೆಯಿಂದ ಪ್ರತಿಕ್ರಿಯೆ ನೀಡಿದ್ದ ಭಾರತ, ಈಗ 39 ಪಾಕಿಸ್ತಾನಿ ಖೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಪಾಕಿಸ್ತಾನದೊಂದಿಗೆ ಮತ್ತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com