ಬಿಹಾರ: ಗುಂಡಿಟ್ಟು ಪತ್ರಕರ್ತನ ಬರ್ಬರ ಹತ್ಯೆ

ಬಂದೂಕು ಹಿಡಿದು ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ಪತ್ರಕರ್ತನನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಬಿಹಾರದ ಸಮಸ್ತಿಪುರ ಜಿಲ್ಲೆಯ ಸಲ್ಖಾನಿ ಗ್ರಾಮದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಪಾಟ್ನ: ಬಂದೂಕು ಹಿಡಿದು ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ಪತ್ರಕರ್ತನನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಬಿಹಾರದ ಸಮಸ್ತಿಪುರ ಜಿಲ್ಲೆಯ ಸಲ್ಖಾನಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸಮಸ್ತಿಪುರದಿಂದ 40 ಕಿ.ಮೀ. ದೂರದಲ್ಲಿರುವ ಸಲ್ಖಾನಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಿಂದಿಯ ಪ್ರಮುಖ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬ್ರಜ್ ಕುಮಾರ್ ಸಿಂಗ್ ಹತ್ಯೆಯಾದ ಪತ್ರಕರ್ತರಾಗಿದ್ದಾರೆ. ಹತ್ಯೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತನಿಖೆ ಆರಂಭಿಸಿದ್ದಾರೆ.

ಈ ಹಿಂದೆ 2016 ನವೆಂಬರ್ ತಿಂಗಳಿನಲ್ಲಿ ಖ್ಯಾತ ಪ್ರಾದೇಶಿಕ ಪತ್ರಿಕೆಯ ಪತ್ರಕರ್ತ ಧರ್ಮೇಂದ್ರ ಸಿಂಗ್ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಹಿಂದಿ ದಿನಪತ್ರಿಕೆಯ ಹಿಂದೂಸ್ತಾನ್ ಸಿವನ್ ಬ್ಯೂರೋ ಮುಖ್ಯಸ್ಥ ರಾಜೇಡೋ ರಂಜನ್ ಅವರನ್ನು ಸಿವಾನ್ ಜಿಲ್ಲೆಯಲ್ಲಿ 2016 ಮೇ ತಿಂಗಳಿನಲ್ಲಿ ಹತ್ಯೆ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com