229 ಪೈಕಿ 212 ಶಾಸಕರು ಅಖಿಲೇಶ್'ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ: ರಾಮ್ ಗೋಪಾಲ್ ಯಾದವ್

229 ಶಾಸಕರ ಪೈಕಿ 212 ಶಾಸಕರು ಈಗಾಗಲೇ ಅಖಿಲೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಶುಕ್ರವಾರ...
ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್
ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್

ಲಖನೌ: 229 ಶಾಸಕರ ಪೈಕಿ 212 ಶಾಸಕರು ಈಗಾಗಲೇ ಅಖಿಲೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಶುಕ್ರವಾರ ಹೇಳಿದ್ದಾರೆ.

ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, 229 ಶಾಸಕರ ಪೈಕಿ ಅಖಿಲೇಶ್ ಅವರಿಗೆ 212 ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. 68 ಎಂಎಲ್ ಸಿ ಗಳ ಪೈಕಿ 56 ಹಾಗೂ 24 ಸಂಸದರ ಪೈಕಿ 15 ಮಂದಿ ಅಖಿಲೇಶ್ ಗೆ ಬೆಂಬಲ ವ್ಯಕ್ತಪಡಿಸಿದ ಅಫಿಡವಿಟ್ ಗೆ ಸಹಿ ಮಾಡಿದ್ದಾರೆಂದು ಹೇಳಿದ್ದಾರೆ.

ಜನವರಿ 9 ರೊಳಗಾಗಿ ಪಕ್ಷದ ನಾಯಕರ ಅಭಿಪ್ರಾಯ ಕುರಿತಂತೆ ಅಫಿಡವಿಟ್ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಇದೀಗ ಎಲ್ಲಾ ನಾಯಕರ ಅಭಿಪ್ರಾಯಗಳನ್ನು ಕಲೆಹಾಕಲಾಗಿದ್ದು, ಪಕ್ಷದಲ್ಲಿರುವ ಬಹುತೇಕರು ಅಖಿಲೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಅಫಿಡವಿಟ್ ಗೆ ಸಹಿ ಮಾಡಿದ್ದಾರೆ, ಇಂದು 3-4 ಗಂಟೆಗೆ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಅಫಿಡವಿಟ್ ನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪಕ್ಷದಲ್ಲಿ ಉಂಟಾಗಿರುವ ಬಿರುಕು ಕುರಿತಂತೆ ಮಾತನಾಡಿರುವ ಅವರು, ಪಕ್ಷ ಅಖಿಲೇಶ್ ಅವರ ನೇತೃತ್ವದಲ್ಲಿದ್ದರೆ ನಿಜವಾದ ಸಮಾಜವಾದಿ ಪಕ್ಷವಾಗಲಿದೆ. ಅಖಿಲೇಶ್ ಅವರ ನೇತೃತ್ವದಲ್ಲಿಯೇ ಪಕ್ಷವನ್ನು ನೋಡಲು ಇಚ್ಛಿಸುತ್ತೇವೆ. ಪಕ್ಷದ ಚಿಹ್ನೆ 'ಸೈಕಲ್' ನಮಗೆ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com