ಆಕಾಶ್ ಕ್ಷಿಪಣಿ
ಆಕಾಶ್ ಕ್ಷಿಪಣಿ

ಬ್ರಹ್ಮೋಸ್ ನಂತರ ವಿಯೆಟ್ನಾಂ ಗೆ ಭಾರತದ ಆಕಾಶ್ ಕ್ಷಿಪಣಿ?

ಕ್ಷಿಪಣಿ ಮಾರಾಟ ಮಾರುಕಟ್ಟೆಯನ್ನು ವಿಸ್ತರಿಸಲು ಯತ್ನಿಸುತ್ತಿರುವ ಭಾರತ ಈಗ ವಿಯೆಟ್ನಾಂ ನೊಂದಿಗೆ ಆಕಾಶ್ ಕ್ಷಿಪಣಿಗಳನ್ನು ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದೆ.
ನವದೆಹಲಿ: ಕ್ಷಿಪಣಿ ಮಾರಾಟ ಮಾರುಕಟ್ಟೆಯನ್ನು ವಿಸ್ತರಿಸಲು ಯತ್ನಿಸುತ್ತಿರುವ ಭಾರತ ಈಗ ವಿಯೆಟ್ನಾಂ ನೊಂದಿಗೆ ಆಕಾಶ್ ಕ್ಷಿಪಣಿಗಳನ್ನು ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದೆ.  
ಚೀನಾ ಭಾರತದ ಎನ್ಎಸ್ ಜಿ ಸದಸ್ಯತ್ವ, ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಪ್ರಕ್ರಿಯೆಗೆ ಅಡ್ಡಗಾಲು ಹಾಕುವುದರೊಂದಿಗೆ ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ನೌಕಾ ನೆಲೆಗಳ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದರ ಬೆನ್ನಲ್ಲೇ ಭಾರತ ವಿಯೆಟ್ನಾಂ ನೊಂದಿಗಿನ ಮಿಲಿಟರಿ ಬಾಂಧವ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಕಾಶ್ ಕ್ಷಿಪಣಿ ಮಾರಾಟದ ಬಗ್ಗೆ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. 
ಚೀನಾದ ತಂತ್ರಗಳಿಗೆ ಪ್ರತಿತಂತ್ರ ರೂಪಿಸುತ್ತಿರುವ ಭಾರತ ಚೀನಾದ ನೆರೆರಾಷ್ಟ್ರಗಳೊಂದಿಗೆ ಪ್ರಮುಖವಾಗಿ ವಿಯೆಟ್ನಾಂ, ಜಪಾನ್ ನೊಂದಿಗೆ ಮಿಲಿಟರಿ ಬಾಂಧವ್ಯವನ್ನು ಕ್ಷಿಪ್ರಗತಿಯಲ್ಲಿ ವೃದ್ಧಿಸುತ್ತಿದೆ. ಇದರ ಭಾಗವಾಗಿ 25 ಕಿಮೀ ವ್ಯಾಪ್ತಿಯವರೆಗೂ ಪ್ರತಿಬಂಧ ಶಕ್ತಿ ಹೊಂದಿರುವ ಆಕಾಶ್ ಕ್ಷಿಪಣಿಯನ್ನು ಮಾರಾಟ ಮಾಡುವ ಬಗ್ಗೆ ವಿಯೆಟ್ನಾಂ ನೊಂದಿಗೆ ಮಾತುಕತೆ ನಡೆಯುತ್ತಿದೆ. 
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವಿಯೆಟ್ನಾಂ ನ್ನು ಆಪ್ತ ಮಿತ್ರ ಎಂದು ಬಣ್ಣಿಸಿದ್ದು, ವಿಯೆಟ್ನಾಂ ನೊಂದಿಗಿನ ರಕ್ಷಣಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಭಾಗವಾಗಿ ಈಗ ಭಾರತ ಆಕಾಶ್ ಕ್ಷಿಪಣಿ ಮಾರಾಟದ ಪ್ರಸ್ತಾವನೆಯನ್ನು ಮುಂದಿಟ್ಟಿದೆ. 

Related Stories

No stories found.

Advertisement

X
Kannada Prabha
www.kannadaprabha.com