ಭಾರತೀಯ ರೈಲ್ವೆ ಅಭಿವೃದ್ಧಿಗೆ ಕೇಂದ್ರದ ಆದ್ಯತೆ: ಪ್ರಧಾನಿ ಮೋದಿ

ಭಾರತೀಯ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರಮುಖ ಆದ್ಯತೆಯನ್ನು ನೀಡಿದ್ದು, ರೈಲ್ವೆ ದೇಶಕ್ಕೆ ವೇಗ ಹಾಗೂ ಪ್ರಗತಿಯನ್ನು ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ಭಾರತೀಯ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರಮುಖ ಆದ್ಯತೆಯನ್ನು ನೀಡಿದ್ದು, ರೈಲ್ವೆ ದೇಶಕ್ಕೆ ವೇಗ ಹಾಗೂ ಪ್ರಗತಿಯನ್ನು ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

ಗಾಂಧಿನಗರ ರೈಲು ನಿಲ್ದಾಣ ಸಮುಚ್ಚಯವನ್ನು ಪುನರ್ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿಸುವ ಪ್ರಧಾನಿ ಮೋದಿಯವರು ಜನರ ಜೀವನದಲ್ಲಿ ರೈಲ್ವೆ ಗುಣಾತ್ಮಕ ಬದಲಾವಣೆಗಳನ್ನು ತಂದಿದ್ದು, ಭಾರತೀಯ ರೈಲ್ವೆ ಅಭಿವೃದ್ಧಿ ಕೇಂದ್ರ ಸರ್ಕಾರ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಜನರ ಜೀವನದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯನ್ನು ಅಭಿವೃದ್ಧಿ ಪಡಿಸಲು ಕೇಂದ್ರದ ಎನ್ ಡಿಎ ಸರ್ಕಾರ ಶ್ರಮ ಪಡುತ್ತಿದೆ. ರೈಲ್ವೆ ದೇಶಕ್ಕೆ ವೇಗ ಹಾಗೂ ಪ್ರಗತಿಯನ್ನು ನೀಡಿದ್ದು, ರೈಲ್ವೆ ಸುಧಾರಣೆಯ ಪರಿಣಾಮವಾಗಿ ಬಡವರಿಗೆ ಅನುಕೂಲವಾಗುತ್ತದೆ.

ರೈಲ್ವೆ ಸಚಿವಾಲಯಕ್ಕೆ ನೀಡುವ ಬಜೆಟ್ ನ್ನು ದ್ವಿಗುಣಗೊಳಿಸಲಾಗಿದ್ದು, ಈ ಹಣವನ್ನು ರೈಲ್ವೆ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಗೇಜ್ ಪರಿವರ್ತನೆ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದ್ದು, ರೈಲ್ವೆ ಹಳಿಗಳ ವಿದ್ಯುದೀಕಱಣ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ಜೈವಿಕ ಶೌಚಗೃಹಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ಅಭಿವೃದ್ಧಿಗೊಂಡಿರುವ ದೇಶಗಳಲ್ಲಿ ಶೇ.70 ರಷ್ಟು ಸರಕು ಸಾಗಾಣೆಯನ್ನು ರೈಲ್ವೆ ಮಾಡುತ್ತದೆ. ಆದರೆ, ಭಾರತದಲ್ಲಿ ಶೇ.15-20 ರಷ್ಟು ಸರಕು ಸಾಗಾಣೆ ಮಾಡಲಾಗುತ್ತಿದೆ. ಉಳಿದ್ದದ್ದನ್ನು ರಸ್ತೆ ಮೂಲಕವೇ ಸಾಗಾಣೆ ಮಾಡಲಾಗುತ್ತಿದೆ. ಕಾರ್ಗೆ ವಿಸ್ತರಣೆಯತ್ತಲೂ ನಾವು ಗಮನ ಹರಿಸುತ್ತಿದ್ದೇವೆ.

ಈ ಹಿಂದೆ ರೈಲ್ವೆ ಇಲಾಖೆ ಮೇಲೆ ಅಂದಿನ ಆಡಳಿತಾರೂಢ ಸರ್ಕಾರ ಹಿಡಿತ ಸಾಧಿಸಿತ್ತು. ರೈಲ್ವೆ ಅಧಿಕಾರಿಗಳು ಏನೇ ಬೇಕಿದ್ದರೂ ಸರ್ಕಾರದ ಬಳಿ ಚೌಕಾಸಿ ಮಾಡಿಕೊಂಡು ಪಡೆಯುತ್ತಿತ್ತು. ಹಿಡಿತ ಸಾಧಿಸಿದ್ದ ಸರ್ಕಾರಗಳು ರೈಲ್ವೆ ಇಲಾಖೆ ಕಡೆ ಗಮನ ಕೊಡುತ್ತಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈಲ್ವೆ ಇಲಾಖೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಇದು ಹೀಗೆಯೇ ಮುಂದುವರೆಯಲಿದೆ. ರೈಲ್ವೆ ಇಲಾಖೆ ಹೀಗಾಯೇ ಅಭಿವೃದ್ಧಿಯನ್ನು ಕಾಣಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com