ಭಾರತೀಯ ಸೇನೆ
ಭಾರತೀಯ ಸೇನೆ

ಕಳೆದ 2 ವರ್ಷದಲ್ಲಿ ಪಾಕ್ ಗುಂಡಿನ ದಾಳಿಯಲ್ಲಿ 26 ಮಂದಿ ಸಾವು: ಸರ್ಕಾರ

ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ 26 ಸಾರ್ವಜನಿಕರು ಮೃತಪಟ್ಟಿದ್ದು 158ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ...
ಜಮ್ಮು: ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ 26 ಸಾರ್ವಜನಿಕರು ಮೃತಪಟ್ಟಿದ್ದು 158ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಜಮ್ಮು ಸರ್ಕಾರ ಹೇಳಿದೆ. 
ನ್ಯಾಷನಲ್ ಕಾನ್ಫರೆನ್ಸ್ ಸದಸ್ಯ ಅಲಿ ಮೊಹಮ್ಮದ್ ಸಾಗರ್ ಅವರು ಗಡಿಯಲ್ಲಿ ಪಾಕಿಸ್ತಾನ ಗುಂಡಿನ ದಾಳಿ ಕುರಿತು ವರದಿ ನೀಡುವಂತೆ ಆಗ್ರಹಿಸಿದ್ದರು. ಈ ಸಂಬಂಧ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. 
ಪೂಂಚ್ ಜಿಲ್ಲೆಯಲ್ಲಿ 9 ಮಂದಿ, ಜಮ್ಮು ಮತ್ತು ಸಾಂಬಾ ಜಿಲ್ಲೆಯಲ್ಲಿ ತಲಾ 7 ಮಂದಿ ಮತ್ತು ರಜೌರಿಯಲ್ಲಿ 2 ಮತ್ತು ಕತೌಹ್ ನಲ್ಲಿ ಓರ್ವ ಮೃತಪಟ್ಟಿರುವುದಾಗಿ ಹೇಳಿದ್ದಾರೆ. 
ಇನ್ನು ಜಮ್ಮುವಿನಲ್ಲಿ 91 ಮಂದಿ, ಪೂಂಚ್ ನಲ್ಲಿ 31, ಕತೌಹ್ ನಲ್ಲಿ 13, ಸಾಂಬಾದಲ್ಲಿ 12, ಕುಪ್ವಾರದಲ್ಲಿ 8 ಮತ್ತು ರಚೌರಿಯಲ್ಲಿ 3 ಮಂದಿ ಗಾಯಗೊಂಡಿದ್ದಾರೆ ಎಂದು ಸಿಎಂ ಹೇಳಿದ್ದಾರೆ. 
ಗುಂಡಿನ ದಾಳಿಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಸದ್ಯ 26 ಲಕ್ಷ ರುಪಾಯಿ ಪರಿಹಾರ ನೀಡಿದ್ದೇವೆ. ಗಾಯಗೊಂಡಿರುವವರಿಗೆ 6.70 ಲಕ್ಷ ಮತ್ತು 42.35 ಲಕ್ಷ ಕಟ್ಟಡಗಳ ಹಾನಿಗೆ ನೀಡಲಾಗಿದೆ ಎಂದರು. 

Related Stories

No stories found.

Advertisement

X
Kannada Prabha
www.kannadaprabha.com